ಮುರುಡೇಶ್ವರದ ಸ.ಪ್ರಾ.ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಸಹಾಯಕ ಆಯುಕ್ತರಿಗೆ ದೂರು

Update: 2020-08-04 16:59 GMT

ಭಟ್ಕಳ: ಮುರುಡೇಶ್ವರದ ಬೇಕರಿ ಉದ್ಯಮಿ ಹುಕ್ಮಾ ರಾಮ್ ಬರೋನ ಆ.3ರಂದು ಹೃದಯಘಾತದಿಂದಾಗಿ ಮೃತಪಟ್ಟಿದ್ದು ಅಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದೇ ಕಾರಣವಾಗಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರತಿದ್ದರೆ ಹುಕ್ಮಾ ರಾಮ್ ಅವರ ಜೀವ ಉಳಿಯುತ್ತಿತ್ತು ಆದ್ದರಿಂದ ವ್ಯಕ್ತಿಯ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಮಂಗಳವಾರ ಮುರುಡೇಶ್ವರದ ಸಾರ್ವಜನಿಕರು ಹಾಗೂ ಮೃತ ವ್ಯಕ್ತಿಯ ಮಗ ಹಿತೇಶ್ ಹುಕ್ಮಾರಾಮ್ ಇಲ್ಲಿನ ಸಹಾಯಕ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ. 

ಸೋಮವಾರ ಎದೆ ನೋವು ಕಾಣಿಸಿಕೊಂಡ ಹುಕ್ಮಾರಾಮ್ ರನ್ನು ಸ್ಥಳಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಅಲ್ಲಿಯೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಅವರನ್ನು ಆಟೋರಿಕ್ಷಾದಲ್ಲಿ ಕೂರಿಸಿ ಆರ್.ಎನ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಯಾವುದೇ ಚಿಕಿತ್ಸೆ ನೀಡದೆ ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ ನೀವು ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿರುವುದಾಗಿ ಆರೋಪಿಸಲಾಗಿದ್ದು, ನಂತರ ಮುರುಡೇಶ್ವರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಕರ್ತವ್ಯದಲ್ಲಿ ವೈದ್ಯರು ನನ್ನ ತಂದೆಯನ್ನು ಆಟೋ ರಿಕ್ಷಾ ದಿಂದ ಕೆಳಗೆ ಇಳಿಸಲು ಅವಕಾಶ ನೀಡದೆ ಯಾವುದೇ ಪ್ರಥಮ ಚಿಕಿತ್ಸೆಯನ್ನು ನೀಡದೆ ಏಕಾಎಕಿ ನೀವು ಬೋಡಿ(ದೇಹ)ವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿ ನೀವು ಹೋಗದಿದ್ದ ಪೊಲೀಸ್ ಕಂಪ್ಲೆಂಟ್ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಸುಮಾರು 2-3 ಗಂಟೆ ಸಯಮ ಕಳೆದಿದ್ದು ನಮ್ಮ ತಂದೆ ಸಾವನ್ನಪ್ಪಿದ್ದಾರೆ. ಇದಕ್ಕೆ ಮುರುಡೇಶ್ವರದ ವೈದ್ಯರೇ ಕಾರಣ ಎಂದೂ ಹಿತೇಶ್ ಹುಕ್ಮಾ ರಾಮ್ ಸಹಾಯಕ ಆಯುಕ್ತರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. 

ಈ ಸಂದರ್ಭದಲ್ಲಿ ಸ್ಥಳಿಯರಾದ ಗಣೇಶ ಎಂ. ನಾಯ್ಕ, ರಾಘವೇಂದ್ರ ಭಟ್, ನಾಗೇಶ್ ನಾಯ್ಕ, ರಾಜೇಶ್ ಶೇಟ್, ವಿಜ್ಞೇಶ್ ನಾಯ್ಕ, ಹೊನ್ನಾ ಮರಾಠಿ, ಜಯಂತ್ ಜಿ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News