ಟ್ವಿಟರ್ ನಲ್ಲಿ ವೈರಲ್ ಆದ ಪ್ರಧಾನಿ ಮೋದಿಯ ‘ಆದಿತ್ಯ ಯೋಗಿನಾಥ್’!

Update: 2020-08-05 14:31 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹೆಸರನ್ನು ಹೇಳುವಾಗ ಪ್ರಧಾನಿ ಮೋದಿಯವರು ಎಡವಟ್ಟು ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ‘ಆದಿತ್ಯ ಯೋಗಿನಾಥ್’ ಎಂದು ಕರೆದರು.

“ವೇದಿಕೆಯಲ್ಲಿ ಉಪಸ್ಥಿತರಿರುವ ಪ್ರಸಿದ್ಧ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ಜಿ” ಎಂದು ಪ್ರಧಾನಿ ಹೇಳಿದರು. ಪ್ರಧಾನಿಯ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

“ಹೆಸರುಗಳನ್ನು ಬದಲಿಸುವುದಕ್ಕೆ ಪ್ರಸಿದ್ಧರಾದ ನಿಮ್ಮ ಹೆಸರನ್ನೇ ಮೋದಿ ಬದಲಿಸಿದಾಗ” ಎಂದು ಟ್ವಿಟರಿಗರೊಬ್ಬರು ಕಾಲೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News