ಒಲಿಂಪಿಕ್ಸ್ ರಿಂಗ್ಸ್ ಟೋಕಿಯೊ ಕೊಲ್ಲಿಯಿಂದ ತಾತ್ಕಾಲಿಕ ತೆರವು

Update: 2020-08-07 06:42 GMT

ಟೋಕಿಯೊ: ಟೋಕಿಯೊ ಕೊಲ್ಲಿಯಲ್ಲಿ ಸ್ಥಾಪಿಸಲಾದ ಒಲಿಂಪಿಕ್ಸ್ ರಿಂಗ್ಸ್‌ನ ಸ್ಮರಣಿಕೆಯನ್ನು ಗುರುವಾರ ತಾತ್ಕಾಲಿಕವಾಗಿ ನಿರ್ವಹಣೆಗಾಗಿ ತೆಗೆದುಹಾಕಲಾಗಿದೆ.

ಡಿಸೆಂಬರ್‌ನಲ್ಲಿ ಜಪಾನ್ ಮರುಹೊಂದಿಸಿದ ಈವೆಂಟ್‌ನ ಅಂತಿಮ ಸಿದ್ಧತೆಯ ಹೊತ್ತಿಗೆ ಮತ್ತೆ ಒಲಿಂಪಿಕ್ಸ್ ಸ್ಮರಣಿಕೆಯನ್ನು ಸ್ಥಾಪಿಸಲಾಗುವುದು.

ಕೊರೋನ ವೈರಸ್ ಸೋಂಕು ಸಮಸ್ಯೆಯನ್ನು ತಂದೊಡ್ಡಿದ ಕಾರಣದಿಂದಾಗಿ ಏಕಾಏಕಿ ಒಲಿಂಪಿಕ್ಸ್‌ನ್ನು ಮಾರ್ಚ್‌ನಲ್ಲಿ ಒಂದು ವರ್ಷ ಮುಂದೂಡಲಾಗಿತ್ತು.

ಏಳು ತಿಂಗಳ ಹಿಂದೆ ಸ್ಥಾಪಿಸಲಾದ 15.3 ಮೀಟರ್ ಎತ್ತರ ಮತ್ತು 32.6 ಮೀ.ಅಗಲವಿರುವ ಈ ಸ್ಮರಣಿಕೆಯನ್ನು ಪುನಃ ಸ್ಥಾಪಿಸುವ ಮೊದಲು ಸ್ವಚ್ಛಗೊಳಿಸಲಾಗುವುದು ಮತ್ತು ಸುರಕ್ಷತಾ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

   ಡಿಸೆಂಬರ್‌ನಲ್ಲಿ ಒಲಿಂಪಿಕ್ಸ್ ರಿಂಗ್ಸ್‌ಗಳನ್ನು ಮರು-ಸ್ಥಾಪಿಸುವಾಗ ಸಂಘಟಕರು ಮುಂದಿನ ವರ್ಷ ಟೋಕಿಯೊದಲ್ಲಿ ಕೋವಿಡ್ -19 ನಡುವೆ ಕ್ರೀಡಾಕೂಟ ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಕೋವಿಡ್ -19 ಸವಾಲಿನ ನಡುವೆಯೂ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುವುದು ಜಗತ್ತಿಗೆ ಸಕಾರಾತ್ಮಕ ಸಂಕೇತವಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News