ವಸಾಹತುಶಾಹಿ ಯುಗದ 'ಖಲಾಸಿ' ವ್ಯವಸ್ಥೆ ಕೊನೆಗೊಳಿಸಲು ಮುಂದಾದ ರೈಲ್ವೇಸ್

Update: 2020-08-07 08:08 GMT

ಹೊಸದಿಲ್ಲಿ,ಆ.7: ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುವ ಖಲಾಸಿ ಅಥವಾ ಬಂಗ್ಲೆ ಪಿಯೊನ್‌ಗಳನ್ನು ನೇಮಿಸುವ ವಸಾತುಶಾಹಿ ಯುಗದ ಅಭ್ಯಾಸವನ್ನು ಕೊನೆಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಹುದ್ದೆಗೆ ಹೊಸ ನೇಮಕಾತಿ ಇಲ್ಲ ಎಂದು ರೈಲ್ವೆ ಮಂಡಳಿಯ ಆದೇಶದ ಬಳಿಕ ಈ ಹೆಜ್ಜೆ ಇಡಲು ಚಿಂತನೆ ನಡೆಯುತ್ತಿದೆ.

ಟೆಲಿಫೋನ್ ಅಟೆಂಡೆಂಟ್-ಕಮ್-ಡಾಕ್ ಖಲಾಸಿಸ್‌ಗೆ (ಟಿಎಡಿಕೆ)ಸಂಬಂಧಿಸಿದ ವಿಷಯ ಪರಿಶೀಲನೆಯಲ್ಲಿದೆ ಎಂದು ರೈಲ್ವೆ ಮಂಡಳಿ ಗುರುವಾರ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಟಿಎಡಿಕೆ ನೇಮಕಕ್ಕೆ ಸಂಬಂಧಿಸಿದ ವಿಚಾರ ರೈಲ್ವೆ ಮಂಡಳಿಯಲ್ಲಿ ಪರಿಶೀಲನೆಯಲ್ಲಿದೆ. ಹೀಗಾಗಿ ಟಿಎಡಿಕೆ ಬದಲಿಗೆ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಬಾರದು ಅಥವಾ ತಕ್ಷಣ ಜಾರಿಗೆ ತರಬಾರದು ಎಂದು ನಿರ್ಧರಿಸಲಾಗಿದೆ. ಅದಲ್ಲದೆ 2020ರ ಜುಲೈ 1ರಿಂದ ಅಂತಹ ನೇಮಕಾತಿಗಳಿಗೆ ಅನುಮೋದನೆ ಪಡೆದ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಬಹುದು ಹಾಗೂ ಮಂಡಳಿಗೆ ಸೂಚಿಸಬಹುದು. ಇದನ್ನು ಎಲ್ಲಾ ರೈಲ್ವೆ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News