ದಿಲ್ಲಿಯಲ್ಲಿ ಭಾರೀ ಮಳೆಗೆ ಸಿಎಂ ಕೇಜ್ರಿವಾಲ್ ಮನೆಯ ಮೇಲ್ಛಾವಣಿ ಕುಸಿತ

Update: 2020-08-07 08:28 GMT

ಹೊಸದಿಲ್ಲಿ, ಆ.7: ಕಳೆದ ವಾರ ನಗರದಲ್ಲಿ ಸುರಿದ ಭಾರೀ ಮಳೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಮನೆಯ ಮೇಲ್ಛಾವಣಿಯು ಕುಸಿದು ಬಿದ್ದಿದೆ. ಸಿಎಂ ನಿವಾಸವು ಸಿವಿಲ್ ಲೈನ್‌ನ ಫ್ಲಾಗ್ ಸ್ಟಾಫ್ ರೋಡ್‌ನಲ್ಲಿದೆ.

ಮನೆಯ ಕೊಠಡಿಯನ್ನು ಸಿಎಂ ಸ್ವತಃ ಬಳಸುತ್ತಿದ್ದರು. ಕಳೆದ ಕೆಲವು ತಿಂಗಳಲ್ಲಿ ಮುಖ್ಯವಾಗಿ ಕೊರೋನ ಕೇಸ್‌ಗಳು ಬಂದ ಬಳಿಕ ಹಲವು ಸಭೆಗಳನ್ನು ಇಲ್ಲಿಯೇ ನಡೆಸಿದ್ದರು. ಘಟನೆಯ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಲ್ಚಾವಣಿಯ ದುರಸ್ತಿ ಕಾರ್ಯ ನಡೆಸಲಾಗಿದ್ದು, ಮನೆಗೆ ಹೊಂದಿಕೊಂಡಿರುವ ಶೌಚಾಲಯವು ಕುಸಿದುಬಿದ್ದಿದೆ. ಪಿಡಬ್ಲುಡಿ ಅಧಿಕಾರಿಗಳು ಹಾನಿಯ ಬಗ್ಗೆ ಪರಿಶೀಲಿಸುತ್ತಿದ್ದು, ವರದಿ ಸಿದ್ಧವಾಗಿದ್ದು, ಕೂಡಲೇ ಅದನ್ನು ಸಲ್ಲಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

1942ರಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ ಕೇಜ್ರಿವಾಲ್ 2015ರಲ್ಲಿ ಆಗಮಿಸಿದ್ದರು. 2014ರಲ್ಲಿ ಮುಖ್ಯಮಂತ್ರಿಯಾಗಿ ತ ್ನಮೊದಲ ಅವಧಿಯಲ್ಲಿ ತಿಲಕ್‌ಲೇನ್‌ನಲ್ಲಿರುವ ಮೂರು ಬೆಡ್‌ರೂಮ್‌ನ ಮನೆಯು ಕೇಜ್ರಿವಾಲ್‌ಗೆ ಮಂಜೂರಾಗಿತ್ತು. ಸಿವಿಲ್‌ಲೈನ್‌ನಲ್ಲಿರುವ ಮನೆಯಲ್ಲಿ ಐದು ಬೆಡ್‌ರೂಮ್‌ಗಳಿವೆ ಹಾಗೂ ಪ್ರತ್ಯೇಕ ಕಚೇರಿಗೆ ಸ್ಥಳವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News