ಹಕ್ಕುಪತ್ರ ವಿತರಿಸಲು ಕೂಡಲೇ ಕ್ರಮ: ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ

Update: 2020-08-07 15:32 GMT

ಉಡುಪಿ, ಆ.7: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ಹಕ್ಕುಪತ್ರ ವಿತರಣೆಯಲ್ಲಿ ಆಗಿರುವ ಲೋಪದೋಷದ ಕುರಿತು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಂದಾಯ ಇಲಾಖೆ ಅಧಿಕಾರಿ ಗಳೊಂದಿಗೆ ಚರ್ಚಿಸಿ, ಹಕ್ಕು ಪತ್ರ ವಿತರಿಸಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಇಲಾಖೆಗಳೊಂದಿಗಿನ ಸಮನ್ವಯ ಕೊರತೆಯಿಂದ ಹಕ್ಕುಪತ್ರ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಚಿವರು ಸಭೆಯಲ್ಲಿ ಪ್ರಸ್ತಾಪಿ ಸಿದರು. ಈ ಬಗ್ಗೆ 5 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ನಡೆಸಿ ಹಕ್ಕುಪತ್ರ ನೀಡಲು ಕೂಡಲೇ ಕ್ರಮ ವಹಿಸ ಬೇಕೆಂದು ಸೂಚಿಸಿದರು.

ಸಭೆಯಲ್ಲಿ ಬ್ರಹ್ಮಾವರ ತಹಶೀಲ್ದಾರ ಕಿರಣ್ ಗೋರಯ್ಯ, ಉಡುಪಿ ಕರಾವಳಿ ನಿಯಂತ್ರಣ ವಲಯದ ಪ್ರಾದೇಶಿಕ ನಿರ್ದೇಶ ಸವಿತಾ ಖಾದ್ರಿ, ಕಂದಾಯ ನಿರೀಕ್ಷಕ ರಾಜೀವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆನ್ನಿ ಕ್ವಾಡ್ರಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News