ಕೇರಳ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ಮುಳಕ್ಕಲ್‌ಗೆ ಜಾಮೀನು

Update: 2020-08-07 16:53 GMT

ಕೊಟ್ಟಾಯಂ, ಆ. 7: ಕೇರಳ ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಆರೋಪಿ ಫ್ರಾಂಕೋ ಮುಳಕ್ಕಲ್‌ಗೆ ಕೊಟ್ಟಾಯಂನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶುಕ್ರವಾರ ಜಾಮೀನು ಮುಂಜೂರು ಮಾಡಿದೆ. ವೈಯಕ್ತಿಕವಾಗಿ ಹಾಜರಾಗದ ಹಿನ್ನೆಲೆಯಲ್ಲಿ ಈ ಹಿಂದೆ ಮುಳಕ್ಕಲ್‌ಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು. ತಾನು ಕೊರೋನ ಸೋಂಕಿಗೆ ಒಳಗಾಗಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದೇನೆ ಎಂದು ಮುಳಕ್ಕಲ್ ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಆಗಸ್ಟ್ 13ರಂದು ಓದಲಾಗುತ್ತದೆ. ಅದುವರೆಗೆ ಮುಳಕ್ಕಲ್ ಕೇರಳ ಬಿಟ್ಟು ಹೋಗುವಂತೆ ಇಲ್ಲ. ಫ್ರಾಂಕೋ ಮಳಕ್ಕಲ್ ಈಗಾಗಲೇ ಜಾಮೀನಿನಲ್ಲಿ ಇದ್ದಾರೆ. ಆದರೆ, ಜಾಮೀನು ಶರತ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರ ಜಾಮೀನನ್ನು ರದ್ದುಗೊಳಿಸಲಾಗಿತ್ತು. ಆದರೆ, ಅನಂತರ ಅವರನ್ನು ಬಂಧಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News