ಪುತ್ತೂರು, ಕಡಬ: 15 ಕೊರೋನ ಪಾಸಿಟಿವ್ ಪ್ರಕರಣ ದೃಡ

Update: 2020-08-08 06:45 GMT

ಪುತ್ತೂರು, ಆ.8: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಕೊರೋನ ಹಾವಳಿ ಮುಂದುವರಿದಿದ್ದು, ಶನಿವಾರ ಒಟ್ಟು 15 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಈ ಪೈಕಿ ಕಡಬ ತಾಲೂಕಿನ ಕೋಡಿಂಬಾಳದ ಒಂದೇ ಕುಟುಂಬದ ನಾಲ್ವರು ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿದೆ. ಇದರೊಂದಿಗೆ ಉಭಯ ತಾಲೂಕುಗಳಲ್ಲಿ ಈ ತನಕ ದೃಢಪಟ್ಟ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 373ಕ್ಕೆ ಏರಿಕೆಯಾಗಿದೆ. 

ಪುತ್ತೂರು ತಾಲೂಕಿನಲ್ಲಿ:
ಹಿರೇಬಂಡಾಡಿ ಗ್ರಾಮದ 59 ವರ್ಷದ ಪುರುಷ, ಕೆದಂಬಾಡಿ ಗ್ರಾಮದ 27 ವರ್ಷದ ಯುವತಿ, ಉಪ್ಪಿನಂಗಡಿಯ 48 ವರ್ಷದ ಪುರುಷ, 34ನೇ ನೆಕ್ಕಿಲಾಡಿ ಗ್ರಾಮದ 37 ವರ್ಷದ ಮಹಿಳೆ, ಪುತ್ತೂರು ನಗರಸಭಾ ವ್ಯಾಪ್ತಿಯ ಕರ್ಮಲದ 53 ವರ್ಷದ ಪುರುಷ, ನೆಹರೂ ನಗರದ 57 ಮಹಿಳೆ ಹಾಗೂ ಕಾವು ಮಾಡ್ನೂರು ಗ್ರಾಮದ 42 ವರ್ಷದ ಪುರುಷರೊಬ್ಬರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.

ಕಡಬ ತಾಲೂಕಿನಲ್ಲಿ

ಕೋಡಿಂಬಾಳ ಗ್ರಾಮದ ಒಂದೇ ಮನೆಯ 75 ವರ್ಷದ ಪುರುಷ, 45 ವರ್ಷದ ಪುರುಷ, 28 ವರ್ಷದ ಯುವತಿ ಹಾಗೂ 68 ವರ್ಷದ ಮಹಿಳೆ, ಕಾಣಿಯೂರು ಗ್ರಾಮದ ಕೈಮಜಲು ನಿವಾಸಿಗಳಾದ ಒಂದೇ ಮನೆಯ 65 ವರ್ಷದ ಮಹಿಳೆ, 23 ವರ್ಷದ ಯುವತಿ, 20 ವರ್ಷದ ಯುವತಿ, ಕಾಣಿಯೂರು ಗ್ರಾಮದ ಬೆಜರಂಗಳ ನಿವಾಸಿ 15 ವರ್ಷದ ಬಾಲಕನೊಬ್ಬನಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News