ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಉರುಳಿಬಿದ್ದ ಕಾರು

Update: 2020-08-08 06:47 GMT

ಮಂಗಳೂರು, ಆ.8: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ 66ರ ಪಂಪ್‌ವೆಲ್‌ನಲ್ಲಿ ಇಂದು ಪೂರ್ವಾಹ್ನ ನಡೆದಿದೆ.

ನಂತೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕಾರು ಫ್ಲೈಓವರ್ ಪ್ರವೇಶಿಸುವಾಗ ಈ ಅಪಘಾತ ಸಂಭವಿಸಿದೆ. ಈ ಸ್ಥಳದ ರಸ್ತೆಯಲ್ಲಿ ಮಳೆ ನೀರು ತುಂಬಿದ್ದು, ಅದರ ಅರಿವಿಲ್ಲದ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಕಾರು ಉರುಳಿಬಿದ್ದಿದೆ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಕಾರು ಚಾಲಕ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News