ಆಲೆಟ್ಟಿ: ದರೆ ಕುಸಿದು ಮನೆಗೆ ಹಾನಿ

Update: 2020-08-08 07:48 GMT

ಸುಳ್ಯ, ಆ.8: ಮನೆ ಹಿಂಬದಿಯ ದರೆ ಭಾರೀ ಪ್ರಮಾಣದಲ್ಲಿ ಕುಸಿದ ಪರಿಣಾಮ ಮನೆಯೊಂದಕ್ಕೆ ಭಾಗಶಃ ಹಾನಿಯಾದ ಘಟನೆ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ

ಇಲ್ಲಿನ ನಿವಾಸಿ ಮೊರಂಗಲ್ಲು ಶಿವರಾಮ ರೈಯವರ ಮನೆ ಹಿಂಬದಿಯ ದರೆ ಭಾರೀ ಪ್ರಮಾಣದಲ್ಲಿ ನಿನ್ನೆ ರಾತ್ರಿ ಕುಸಿದಿದೆ. ರಾತ್ರಿ1 ಗಂಟೆ ಸುಮಾರಿಗೆ ನಾಯಿ ಜೋರಾಗಿ ಬೊಗಳಿದಾಗ ಮನೆಯ ಒಳಗೆ ಮಲಗಿ ನಿದ್ರಿಸಿದ್ದ ಶಿವರಾಮ ರೈ ದಂಪತಿ ಎಚ್ಚರಗೊಂಡು ಹೊರಗೆ ಬಂದ ವೇಳೆ ದರೆ ಕುಸಿದಿದೆ. ಅವರು ಮಲಗಿದ್ದ ಬೆಡ್ ರೂಂ ವರೆಗೆ ಮಣ್ಣು ಕುಸಿದುಬಿದ್ದಿದೆ. ಶಿವರಾಮ ರೈ ದಂಪತಿ ಪ್ರಾಣಾಪಯದಿಂದ ಪಾರಾಗಿದ್ದಾರೆ

ಮನೆ ಹಿಂಬದಿ ಸಂಪೂರ್ಣವಾಗಿ ಹಾನಿಗೊಂಡಿದೆ. ಶೆಡ್ ನಲ್ಲಿ ನಿಲ್ಲಿಸಿದ ಕಾರಿಗೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News