ಆ.9ರಂದು ‘ಸೀಕೋ ಸುನ್ನ’ 2ನೇ ಭಾಗದ ಪರೀಕ್ಷೆ ಫಲಿತಾಂಶ

Update: 2020-08-08 09:53 GMT

ಬೆಂಗಳೂರು, ಆ.8: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯಾದ್ಯಂತವಿರುವ ಕಾರ್ಯಕರ್ತರಿಗೆ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶಗಳ ಕಲಿಕೆಗಾಗಿ ಹಮ್ಮಿಕೊಂಡ ‘ಸೀಕೋ ಸುನ್ನ’ ಇದರ ಎರಡನೇ ಭಾಗದ ಪರೀಕ್ಷೆಯ ಫಲಿತಾಂಶ ಆ.9ರಂದು ಪೂರ್ವಾಹ್ನ 11  ಗಂಟೆಗೆ  ಎಸ್ಸೆಸ್ಸೆಫ್ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳಲಿದೆ.

ಫಲಿತಾಂಶ ಘೋಷಣಾ ಕಾರ್ಯಕ್ರಮವನ್ನು ಝೂಮ್ ಮತ್ತು ಯೂಟೂಬ್ ನಲ್ಲಿ ನೇರವಾಗಿ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್ ಮದನಿ ಅಧ್ಯಕ್ಷತೆಯಲ್ಲಿ ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ಅಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಕಾಮಿಲ್ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News