ಪ್ರಕೃತಿ ವಿಕೋಪ: ಎಸ್ಸೆಸ್ಸೆಫ್ ದ.ಕ. ಈಸ್ಟ್ ಝೋನ್ ನಿಂದ 500 ಮಂದಿಯ ಕ್ಯೂಟೀಮ್ ತುರ್ತು ಸೇವಾ ತಂಡ

Update: 2020-08-08 12:47 GMT

ಮಂಗಳೂರು, ಆ.8: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಹೆಲ್ಪ್ ಡೆಸ್ಕ್ ಇದರ ನಿರ್ದೇಶನದಂತೆ ಪ್ರಕೃತಿ ವಿಕೋಪ, ನೆರೆ ಸಂದರ್ಭಗಳಲ್ಲಿ ತುರ್ತಾಗಿ ಕಾರ್ಯಾಚರಿಸಲು ಎಸ್ಸೆಸ್ಸೆಫ್ ದ.ಕ. ಈಸ್ಟ್ ಝೋನ್ ವ್ಯಾಪ್ತಿಯ ಐದು ಡಿವಿಷನ್‌ಗಳಲ್ಲಿ 500 ಮಂದಿಯ ಕ್ಯೂ ಟೀಮ್ ತುರ್ತು ಸೇವಾ ತಂಡ ಸನ್ನದ್ದವಾಗಿದೆ ಎಂದು ಕ್ಯೂ ಟೀಮ್ ಝೋನಲ್ ಅಡ್ಮಿನ್ ಝುಬೈರ್ ಸಖಾಫಿ ಗಟ್ಟಮನೆ ತಿಳಿಸಿದ್ದಾರೆ. 

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಝೋನ್ ವ್ಯಾಪ್ತಿಯ ಪ್ರತೀ ಡಿವಿಷನ್ ಕೇಂದ್ರಗಳಲ್ಲಿ ಸದಾ ಸಮಯ ತುರ್ತು ಸೇವೆಗೆ ಸನ್ನದ್ದರಾಗಿರುವ ಸಕ್ರಿಯ ಕಾರ್ಯಕರ್ತರ ತುರ್ತು ಸೇವಾ ತಂಡ ರಚಿಸಲಾಗಿದ್ದು ಯಾವುದೇ ಸಂದರ್ಭದಲ್ಲೂ ತಕ್ಷಣ ಕಾರ್ಯಾಚರಣೆಗೆ ಇಳಿಯಲು ಸಿದ್ಧರಾಗಿದ್ದಾರೆ. ಎಸ್ಸೆಸ್ಸೆಫ್ ದ.ಕ. ಈಸ್ಟ್ ಝೋನ್ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ವಿಟ್ಲ ಡಿವಿಷನ್‌ಗಳಲ್ಲಿ ತಲಾ 100 ಮಂದಿಯಂತೆ ಐದು ಡಿವಿಷನ್‌ಗಳಲ್ಲಿ 500 ಮಂದಿಯ ತಂಡ ಸಿದ್ಧವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದರು.

ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಬಹುದಾಗಿದೆ‌.
ಈಸ್ಟ್ ಝೋನ್: 9880907216, 9632659290, 9591273693
ಪುತ್ತೂರು : 7348942079
ಬೆಳ್ತಂಗಡಿ : 7619305365
ಉಪ್ಪಿನಂಗಡಿ : 8722552235
ಸುಳ್ಯ : 9480307435
ವಿಟ್ಲ : 7353881826

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News