ಉಡುಪಿ: ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿ ನೇಮಕ

Update: 2020-08-08 14:38 GMT

ಉಡುಪಿ, ಆ.8: ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ವಂಡ್ಸೆ , ಈದು, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿ ಖಾಲಿ ಇರುವ 5 ವೈದ್ಯಾಧಿಕಾರಿಗಳಿಗೆ ಹುದ್ದೆಗೆ ಎಂಬಿಬಿಎಸ್ ವಿದ್ಯಾರ್ಹತೆ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಅವ ರನ್ನು ಗುತ್ತಿಗೆ ಆಧಾರದ ಮೇರೆಗೆ ಒಂದು ವಷರ್ ಅವಧಿಗೆ ಅಥವಾ ನೇರ ನೇಮಕಾತಿ ಆಗುವವರೆಗೆ/ಖಾಯಂ ವೈದ್ಯರು ವರ್ಗಾವಣೆಯಿಂದ ಹುದ್ದೆ ಭರ್ತಿಯಾಗುವವರೆಗೆ ನೇಮಕಾತಿ ಮಾಡಲು ವೈದ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ಕಚೇರಿ ಅಜ್ಜರಕಾಡು ಉಡುಪಿ ಇಲ್ಲಿಂದ ಪಡೆದು, ಆ.16ರ ಸಂಜೆಯೊಳಗೆ ಸಲ್ಲಿಸಬಹುದು. ಸಂದರ್ಶನ ದಿನಾಂಕದಂದು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ:0820-2536650ನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News