ಮನೆಯಲ್ಲೇ ಬೆಳೆದ ತರಕಾರಿಯಿಂದ ಆರೋಗ್ಯ ವೃದ್ಧಿ: ಡಾ.ಧನಂಜಯ

Update: 2020-08-08 14:40 GMT

ಉಡುಪಿ, ಆ.8: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಇವುಗಳ ಜಂಟಿ ಆಶ್ರಯದಲ್ಲಿ ತರಕಾರಿ ಬೆಳೆ ಮತ್ತು ಟೆರೇಸ್ ಗಾರ್ಡನಿಂಗ್ ನಿರ್ವಹಣೆಯ ಕುರಿತು ಅಂತರ್ಜಾಲ ತರಬೇತಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಖ್ಯಸ್ಥ ಮತ್ತು ಹಿರಿಯ ವಿಜ್ಞಾನಿ ಡಾ. ಧನಂಜಯ ದೃಶ್ಯ ಮಾಧ್ಯಮದ ಮೂಲಕ ಮನೆಯಂಗಳದಲ್ಲಿ ಬೆಳೆಸಬಹುದಾದ ತರಕಾರಿ ಬೆಳೆಗಳ ಕುರಿತು ಮಾಹಿತಿಗಳನ್ನು ನೀಡಿದರು.

ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿ ಹಣ್ಣು ಹಂಪಲುಗಳಲ್ಲಿ ಉಪಯೋ ಗಿಸಿರುವ ಕೀಟನಾಶಕಗಳ ಬಗ್ಗೆ ಬಳಕೆದಾರರಿಗೆ ಯಾವುದೇ ಮಾಹಿತಿ ಲಭ್ಯ ವಾಗುವುದಿಲ್ಲ. ಅಪಾಯಕಾರಿ ಕೀಟನಾಶಕವನ್ನು ಬಳಸಿದ ತರಕಾರಿ ಸೇವಿಸಿದರೆ ಮಾರಕ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ಆದ್ದದರಿಂದ ತಮ್ಮ ಮನೆಯಂಗಳ ದಲ್ಲಿ ತರಕಾರಿಗಳನ್ನು ಬೆಳೆಸಿ ಉಪಯೋಗಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಮಾರುಕಟ್ಟೆಯಲ್ಲಿ ಲ್ಯವಿರುವತರಕಾರಿಹಣ್ಣುಹಂಪಲುಗಳಲ್ಲಿಉಪಯೋಗಿಸಿರುವಕೀಟನಾಶಕಗಳಬಗ್ಗೆಬಳಕೆದಾರರಿಗೆಯಾವುದೇಮಾಹಿತಿಲ್ಯ ವಾಗುವುದಿಲ್ಲ. ಅಪಾಯಕಾರಿ ಕೀಟನಾಶಕವನ್ನು ಬಳಸಿದ ತರಕಾರಿ ಸೇವಿಸಿದರೆ ಮಾರಕ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ಆದ್ದದರಿಂದ ತಮ್ಮ ಮನೆಯಂಗಳ ದಲ್ಲಿ ತರಕಾರಿಗಳನ್ನು ಬೆಳೆಸಿ ಉಪಯೋಗಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಇನ್ನೋರ್ವ ವಿಜ್ಞಾನಿ ಡಾ. ಚೈತನ್ಯ ದೃಶ್ಯ ಮಾಧ್ಯಮಗಳ ಮೂಲಕ ತಾರಸಿ ಕೃಷಿ ಬಗ್ಗೆ ಮಾಹಿತಿ ನೀಡಿ ತಾರಸಿ ಕೃಷಿಯಲ್ಲಿ ಗಿಡಗಳಿಗೆ ನೀರು, ಗೊಬ್ಬರ, ರೋಗ ನಿಯಂತ್ರಣದ ಕುರಿಂತೆ ಸಮಗ್ರ ಮಾಹಿತಿ ಯನ್ನಿತ್ತರು.

ಪ್ರಗತಿಪರ ಕೃಷಿಕರಾದ ಶಿರ್ವದ ಎಂ.ರಾಮಚಂದ್ರ ಪೈ ಅವರು ಸಾವಯವ ಕೈತೋಟದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಂತರ್ಜಾಲ ತರಬೇತಿಯಲ್ಲಿ ಭಾಗವಹಿಸಿದ ರಾಜ್ಯದ ಅನೇಕ ಆಸಕ್ತರು ತಮ್ಮ ಕೈತೋಟ, ತಾರಸಿ ತೋಟಗಳಲ್ಲಿ ಗಿಡಗಳ ನಿರ್ವಹಣೆ, ರೋಗ ನಿಯಂತ್ರಣ ಕುರಿತ ಸಂದೇಹಗಳಿಗೆ ತಜ್ಞರಿಂದ ಪರಿಹಾರವ್ನು ಪಡೆದುಕೊಂಡರು.

ಬಿವಿಟಿಯ ವ್ಯವಸ್ಥಾಪಕ ಅರುಣ್ ಪಟವರ್ಧನ್ ಸ್ವಾಗತಿಸಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News