ಪಡುಬಿದ್ರಿಯಲ್ಲಿ ಕೋವಿಡ್ ಪರೀಕ್ಷೆ: 10 ಮಂದಿಗೆ ಪಾಸಿಟಿವ್ ದೃಢ

Update: 2020-08-08 15:28 GMT

ಪಡುಬಿದ್ರಿ, ಆ.8: ಇಲ್ಲಿನ ಬೋರ್ಡ್ ಶಾಲೆಯಲ್ಲಿ ಶನಿವಾರ ನಡೆಸಿದ ರ್ಯಾಪಿಡ್ ಕೋವಿಡ್-19 ಪರೀಕ್ಷೆಯಲ್ಲಿ 10 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ. ರಾವ್ ನೇತೃತ್ವದಲ್ಲಿ ಉಡುಪಿ ಮತ್ತು ಮುದರಂಗಡಿ ಆರೋಗ್ಯ ಕೇಂದ್ರಗಳ ಸಹಯೋಗದೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪರೀಕ್ಷೆ ನಡೆಸಲಾಗಿತ್ತು. ಪಡುಬಿದ್ರಿ ಆರೋಗ್ಯ ಕೇಂದ್ರ ವ್ಯಾಪ್ತಿಯ 165 ಮಂದಿ ಕೋವಿಡ್ ಪರೀಕ್ಷೆ ಯಲ್ಲಿ ಭಾಗವಹಿಸಿದ್ದರು. ಪಡುಬಿದ್ರಿಯ ಇಬ್ಬರು, ನಂದಿಕೂರಿನ ಒಬ್ಬರು ಮತ್ತು ಕಂಚಿನಡ್ಕದ 7 ಮಂದಿ ಪುರುಷರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲಿಯೇ ಚಿಕಿತ್ಸೆ ನಡೆದಿದೆ. ಪಡುಬಿದ್ರಿಯ ಇಬ್ಬರು ಪೋಲಿಸರು ಮತ್ತು ಕಾಂಜರಕಟ್ಟೆ ಕಂಪೆನಿಯೊಂದರ ಉದ್ಯೋಗಿಗಳು ರ್ಯಾಪಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟವರು.

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇಂದು ಮೂವರಿಗೆ ಸೋಂಕು ದೃಢವಾಗಿದೆ. ಇಬ್ಬರು ಮೂಳೂರು ಹಾಗೂ ಒಂದು ಪುರಸಭೆಯ ಪೌರಕಾರ್ಮಿಕರಾಗಿದ್ದಾರೆ. ಓರ್ವ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ.

ಬೈಂದೂರು, ಕುಂದಾಪುರ ತಲಾ 18: ಬೈಂದೂರು ಮತ್ತು ಕುಂದಾಪುರ ತಾಲೂಕುಗಳಲ್ಲಿ ಇಂದು ತಲಾ 18 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹಾಗೂ ಇತವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಕುಂದಾಪುರ: ಗುಜ್ಜಾಡಿ, ಬಳ್ಕೂರು ತಲಾ 3, ಕುಂದಾಪುರ ಪುರಸಭೆ 4, ಕಾವ್ರಾಡಿ, ಕೋಟೇಶ್ವರ, ಮೊಳಹಳ್ಳಿ ತಲಾ 2, ಬಸ್ರೂರು, ಸಿದ್ಧಾಪುರ ತಲಾ 1ರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಬೈಂದೂರು: ಕಿರಿಮಂಜೇಶ್ವರ-9, ಉಪ್ಪುಂದ-4, ಬಡಾಕೆರೆ, ಮುಧೂರು, ಶಿರೂರು, ಗೋಳಿಹೊಳೆ, ಬಿಜೂರು ತಲಾ ಒಬ್ಬರು ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News