ಸಾಮಾಜಿಕ ಜಾಲತಾಣದಲ್ಲಿ ಗ್ರಾಪಂ ಗುಮಾಸ್ತೆಯ ಮಾನಹಾನಿ: ದೂರು

Update: 2020-08-08 16:03 GMT

ಬ್ರಹ್ಮಾವರ, ಆ.8: ಉಪ್ಪೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಗುಮಾಸ್ತೆ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಭವಾನಿ (47) ಎಂಬವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನಹಾನಿ ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪೂರು ಕೊಳಲಗಿರಿಯ ಅಶ್ವಿನ್ ಪ್ರಸನ್ನ ರೋಚ್ ಎಂಬಾತ ಜು.31 ರಂದು ಗ್ರಾಪಂ ಕಚೇರಿಗೆ ಬಂದು ಬಿಲ್ಲು ಕೇಳುವ ವಿಚಾರದಲ್ಲಿ ತಗಾದೆ ತೆಗೆದಿದ್ದು, ಈ ವೇಳೆ ಭವಾನಿ ಕಾಮಗಾರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆಗ ಅಶ್ವಿನ್ ಪ್ರಸನ್ನ, ಭವಾನಿಗೆ ಬೈದು, ನಿಂದಿಸಿ ಸುಳ್ಳು ಆರೋಪ ಹೊರಿಸಿ ಅಪಮಾನಿಸುವ ಮೂಲಕ ಅನುಚಿತವಾಗಿ ವರ್ತಿರುವುದಾಗಿ ದೂರಲಾಗಿದೆ.

ಅಲ್ಲದೇ ಆರೋಪಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅಕ್ರಮವಾಗಿ ಮೊಬೈಲ್ ಕ್ಯಾಮರದಲ್ಲಿ ವಿಡಿಯೋ ಶೂಟಿಂಗ್ ಮಾಡಿ ಬಳಿಕ ಆ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನಹಾನಿ ಮಾಡಿದ್ದಾನೆ. ಅದೇ ರೀತಿ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News