ಪಾಕ್ ವಿರುದ್ಧ ಇಂಗ್ಲೆಂಡ್ ಗೆ ಗೆಲುವು

Update: 2020-08-09 07:28 GMT

ಮ್ಯಾಂಚೆಸ್ಟರ್: ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ಸಾಹಸದ ನೆರವಿನಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಪಡೆಯುವಲ್ಲಿ ಶಕ್ತವಾಗಿದ್ದ ಪಾಕಿಸ್ತಾನ ತಂಡ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 277 ರನ್ ಗುರಿ ನಿಗದಿಪಡಿಸಿತ್ತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 82.1 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ರನ್ ಗಳಿಸಿತು. ನಾಲ್ಕನೇ ದಿನವಾದ ಶನಿವಾರ ಒಂದು ಹಂತದಲ್ಲಿ 117 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಆರನೇ ವಿಕೆಟ್ ಜೊತೆಯಾಟದಲ್ಲಿ 139 ರನ್ ಸೇರಿಸಿರುವ ಜೋಸ್ ಬಟ್ಲರ್ (75, 101 ಎಸೆತ, 7 ಬೌಂಡರಿ, 1ಸಿ.) ಹಾಗೂ ಕ್ರಿಸ್ ವೋಕ್ಸ್ (84, 120 ಎಸೆತ, 10 ಬೌಂಡರಿ)ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಪಾಕ್ 169ಕ್ಕೆ ಆಲೌಟ್: ಇದಕ್ಕೂ ಮೊದಲು 8 ವಿಕೆಟ್‌ಗಳ ನಷ್ಟಕ್ಕೆ 137 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಪಾಕ್ ತಂಡ 46.4 ಓವರ್‌ಗಳಲ್ಲಿ 169 ರನ್‌ಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 107 ರನ್ ಮುನ್ನಡೆ ಸಂಪಾದಿಸಿದ್ದ ಪಾಕ್ ತಂಡ ಆತಿಥೇಯರಿಗೆ ಗೆಲ್ಲಲು 277 ರನ್ ಗುರಿ ನೀಡಿತು.ಚ್ಟ ಪಾಕ್ ಪರ ಬಾಲಂಗೋಚಿ ಯಾಸಿರ್ ಶಾ(33) ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರೆ, ಅಬಿದ್ ಅಲಿ(20), ಶಫೀಕ್(29) ಹಾಗೂ ಎಂ. ರಿಝ್ವೋನ್(27)ಎರಡಂಕೆಯ ಸ್ಕೋರ್ ಗಳಿಸಿದರು. ಇಂಗ್ಲೆಂಡ್‌ನ ಪರ ಸ್ಟುವರ್ಟ್ ಬ್ರಾಡ್(3-37)ಯಶಸ್ವಿ ಬೌಲರ್ ಎನಿಸಿಕೊಂಡರೆ, ವೋಕ್ಸ್(2-11) ಹಾಗೂ ಸ್ಟೋಕ್ಸ್(2-11)ತಲಾ ಎರಡು ವಿಕೆಟ್ ಉರುಳಿಸಿದರು.ಚ್ಟ ಇಂಗ್ಲೆಂಡ್ 2ನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಬನ್ ್ಸರ್  (10) ವಿಕೆಟನ್ನು ಬೇಗನೆ ಕಳೆೆದುಕೊಂಡಿತು. ಆಗ 2ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಗಳಿಸಿದ ನಾಯಕ ಜೋ ರೂಟ್(42) ಹಾಗೂ ಇನ್ನೋರ್ವ ಆರಂಭಿಕ ಆಟಗಾರ ಸಿಬ್ಲೆ(36)ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಆತಿಥೇಯರು ಮತ್ತೆ ಕುಸಿತದ ಹಾದಿ ಹಿಡಿದರು. ಸ್ಟೋಕ್ಸ್(9) ಹಾಗೂ ಪೋಪ್(7) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಆಂಗ್ಲರ ಬೆವರಿಳಿಸಿದ್ದ ಸ್ಪಿನ್ನರ್ ಯಾಸಿರ್ ಶಾ(3-98)2ನೇ ಇನಿಂಗ್ಸ್‌ನಲ್ಲೂ ಕಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News