ಶೀಘ್ರ ಕೊನೆಯಾಗಲಿದೆಯೇ ಕೊರೋನ ಸೋಂಕು?: ಹೊಸ ಸಂಶೋಧನೆ ಹೇಳುವುದು ಹೀಗೆ…

Update: 2020-08-09 12:06 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಪೈಕಿ ಶೇಕಡ 40ರಷ್ಟು ಮಂದಿಗೆ ಯಾವುದೇ ರೋಗಲಕ್ಷಣಗಳು ಇಲ್ಲದಿರುವುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ndtv.com ವರದಿ ಮಾಡಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಮೋನಿಕಾ ಗಾಂಧಿ ಎಂಬ ಸಂಶೋಧಕಿ  ವಿಶ್ಲೇಷಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

ಬೋಸ್ಟನ್ ಹೋಮ್‍ ಲೆಸ್ ಶೆಲ್ಟರ್‍ ನಲ್ಲಿ 147 ಮಂದಿ ಇದ್ದರು. ಇವರು ಒಂದೇ ಕಡೆ ವಾಸವಿದ್ದರೂ ಯಾವುದೇ ರೋಗಲಕ್ಷಣ ಇರಲಿಲ್ಲ. ಅಂತೆಯೇ ಸ್ಪ್ರಿಂಗ್‍ ಡಾನ್ ನ ಟೈಸನ್ ಫುಡ್ ಪೌಲ್ಟ್ರಿ ಪ್ಲಾಂಟ್‍ ನಲ್ಲಿ 481 ಮಂದಿಗೆ ಸೋಂಕು ಇದ್ದು, ಈ ಪೈಕಿ ಶೇಕಡ 95 ಮಂದಿಯಲ್ಲಿ ಯಾವುದೇ ರೋಗಲಕ್ಷಣ ಇರಲಿಲ್ಲ. ಉತ್ತರ ಕ್ಯಾಲಿಫೋರ್ನಿಯಾದ ಅರ್ಕನ್ಸಾಸ್ ಮತ್ತು ವರ್ಜೀನಿಯಾ ಜೈಲಿನಲ್ಲಿ 3277 ಸೋಂಕಿತರ ಪೈಕಿ ಶೇಖಡ 96ರಷ್ಟು ಮಂದಿಗೆ ರೋಗಲಕ್ಷಣ ಇಲ್ಲ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಏಳು ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಈ ಸಾಂಕ್ರಾಮಿಕ 7 ಲಕ್ಷಕ್ಕೂ ಅಧಿಕ ಜೀವ ಬಲಿ ಪಡೆದಿದೆ. ಆದರೂ ಇತರರಿಗೆ ಅದು ಏಕೆ ಸಮಸ್ಯೆ ತಂದೊಡ್ಡಿಲ್ಲ ಎಂಬ ಬಗ್ಗೆ ಮೋನಿಕಾ ಗಾಂಧಿ ಸಂಶೋಧನೆ ನಡೆಸಿದ್ದರು.

ತೀವ್ರ ಅಸ್ವಸ್ಥ ರೋಗಿಗಳ ಪಕ್ಕದಲ್ಲೇ ಇದ್ದರೂ ಇವರಿಗೆ ಆರೋಗ್ಯ ಸ್ಥಿತಿ ಹದಗೆಡದಿರಲು ಏನು ಕಾರಣ ಎಂದು ಅವರು ಆಳವಾದ ಅಧ್ಯಯನ ನಡೆಸಿದ್ದರು. ದಾಳಿ ಮಾಡಿದ ವೈರಸ್ ಪ್ರಮಾಣ ಇದಕ್ಕೆ ಕಾರಣವೇ? ಅಥವಾ ವಂಶವಾಹಿ ಅಂಶ ಕಾರಣವೇ?, ಈ ಪೈಕಿ ಕೆಲವರಿಗೆ ಭಾಗಶಃ ವೈರಸ್‍ಗೆ ಪ್ರತಿರೋಧ ಶಕ್ತಿ ಇತ್ತೇ? ಎಂಬ ಬಗ್ಗೆ ಅಧ್ಯಯನ ನಡೆಸಿದ್ದರು.

ಅಸ್ವಸ್ಥತೆಯ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡಿರುವುದು ಫಲ ನೀಡುತ್ತಿದ್ದು, ಈ ಜ್ಞಾನವು ಲಸಿಕೆ ಹಾಗೂ ಚಿಕಿತ್ಸಾ ವಿಧಾನ ಅಭಿವೃದ್ಧಿಯ ವೇಗವರ್ಧನೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಾಕಷ್ಟು ಮಂದಿಗೆ ಕೊರೋನ ಸಮಸ್ಯೆ ಸೌಮ್ಯವಾಗಿರುವುದರಿಂದ ಇದು ಸಾಂಕ್ರಾಮಿಕವನ್ನು ಮತ್ತಷ್ಟು ಹರಡದಂತೆ ತಡೆಯುವಲ್ಲಿ ಮತ್ತು ಸಾಂಕ್ರಾಮಿಕ ಕೊನೆಗೊಳಿಸುವಲ್ಲಿ ಮಹತ್ವದ ಅಂಶವಾಗಲಿದೆ ಎನ್ನಲಾಗಿದೆ.

ಸ್ಯಾನ್‍ ಫ್ರಾನ್ಸಿಸ್ಕೊದಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯ ಸೋಂಕು ರೋಗಗಳ ತಜ್ಞೆ ಮೋನಿಕಾ ಗಾಂಧಿ ಹೇಳುವಂತೆ, “ರೋಗಲಕ್ಷಣ ಇಲ್ಲದ ಅಧಿಕ ಮಂದಿ ಇರುವುದು ಒಳ್ಳೆಯದು. ಇದು ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಒಳ್ಳೆಯದು” ಎಂದು ಅವರು ಅಭಿಪ್ರಾಯಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News