ಆ.20ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ

Update: 2020-08-09 17:07 GMT

ಮಂಗಳೂರು, ಆ.9: ಭಾರೀ ಮಳೆಯ ಹಿನ್ನಲೆಯಲ್ಲಿ ಕೇರಳವನ್ನು ಸಂಪರ್ಕಿಸುವ ಕೊಂಕಣ ಮಾರ್ಗದ ರೈಲುಗಳ ಸಂಚಾರ ವ್ಯವಸ್ಥೆಯಲ್ಲಿ ಆ.20ರವರೆಗೆ ವ್ಯತ್ಯಯವಿರಲಿದೆ.

ತಿರುವನಂತಪುರ ಸೆಂಟ್ರಲ್- ಲೋಕಮಾನ್ಯ ತಿಲಕ್ (ಟಿ) ಡೈಲಿ ಸ್ಪೆಷಲ್ ಟ್ರೈನ್ ಆ.9ರಿಂದ ಪ್ರಯಾಣ ರದ್ದಾಗಿದ್ದು, ಆ. 20 ತನಕ ರದ್ದು ಮುಂದುವರಿದೆ. ವಾರದಲ್ಲಿ ಮೂರು ದಿನ ಹೊಸದಿಲ್ಲಿಯಿಂದ ಹೊರಡುವ ನವದೆಹಲಿ-ತಿರುವನಂತಪುರ ಸೆಂಟ್ರಲ್ ರಾಜಧಾನಿ ಸುಪರ್ ಫಾಸ್ಟ್ ಸ್ಪೆಷಲ್ ಟ್ರೈನ್ ಆ.11, 12, 16,18ರಂದು ಸಂಚರಿಸುವುದಿಲ್ಲ. ತಿರುವನಂತಪುರ- ನವದೆಹಲಿ ರಾಜಧಾನಿ ಸೂಪರ್ ಫಾಸ್ಟ್ (ವಾರದಲ್ಲಿ ಮೂರು ದಿನ) ತಿರುವನಂತಪುರದಿಂದ ಆ.11, 13, 14, 18,20ರಂದು ಹೊಸದಿಲ್ಲಿಗೆ ತೆರಳುವುದಿಲ್ಲ.

ಮಾರ್ಗ ಬದಲಾವಣೆ

ಎರ್ನಾಕುಳಂ ಜಂಕ್ಷನ್- ಹಝ್ರತ್ ನಿಜಾಮುದ್ದೀನ್ ಡೈಲಿ ಸೂಪರ್ ಫಾಸ್ಟ್ ಸ್ಪೆಷಲ್ ರೈಲು ಆ.9ರಿಂದ 20ರ ತನಕ ಮಡ್‌ಗಾಂವ್-ಲೋಂಡ ಜಂಕ್ಷನ್-ಮೀರಜ್ ಜಂಕ್ಷನ್-ಪುಣೆ-ಪನ್ವೇಲ್- ಕಲ್ಯಾಣ್ ಜಂಕ್ಷನ್ ಮಾರ್ಗ ಸಂಚರಿಸಲಿದೆ.

ಹಝ್ರತ್ ನಿಝಾಮುದ್ದೀನ್-ಎರ್ನಾಕುಳಂ ಜಂಕ್ಷನ್ ತುರಂತೊ ಸಾಪ್ತಾಹಿಕ ರೈಲು ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದಿಂದ ಆ.8 ಮತ್ತು 15ರಂದು ಮತ್ತು ಎರ್ನಾಕುಳಂ ಜಂಕ್ಷನ್- ಹಝ್ರತ್ ನಿಝಾಮುದ್ದೀನ್ ತುರಂತೊ ಸಾಪ್ತಾಹಿಕ ರೈಲು ಎರ್ನಾಕುಳಂ ಜಂಕ್ಷನ್ ನಿಲ್ದಾಣದಿಂದ ಆ.11 ಮತ್ತು 18 ರಂದು ಜೋಳಾರಪೇಟೆ ಜಂಕ್ಷನ್- ಗುಂಡ್ಕಲ್- ಪುಣೆ ಮಾರ್ಗ ಸಂಚರಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News