ಪಡುಬಿದ್ರಿ ಪೊಲೀಸ್ ಸ್ಟೇಷನ್ ಸೀಲ್‍ಡೌನ್

Update: 2020-08-09 17:21 GMT

ಪಡುಬಿದ್ರಿ : ಇಬ್ಬರು ಪೊಲೀಸರಲ್ಲಿ ಕೊರೊನಾ ವೈರಸ್ ದೃಢವಾಗಿರುವುದರಿಂದ ಪಡುಬಿದ್ರಿ ಪೊಲೀಸ್ ಸ್ಟೇಷನ್ ಸೀಲ್‍ಡೌನ್ ಆಗಿದೆ.

ಶನಿವಾರ ಬೋರ್ಡ್ ಶಾಲೆಯಲ್ಲಿ ನಡೆಸಿದ ರ್ಯಾಪಿಡ್ ಕೋವಿಡ್-19 ಪರೀಕ್ಷೆಯಲ್ಲಿ 10 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಲ್ಲಿ ಪಡುಬಿದ್ರಿಯ ಇಬ್ಬರು ಪೋಲಿಸರಿಗೂ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಈಗಾಗಲೇ ಸ್ಟೇಷನ್‍ಗೆ ಸ್ಯಾನಿಟೈಸ್ ಮಾಡಲಾಗಿದೆ. ಪೊಲೀಸ್ ಸ್ಟೇಷನ್‍ನನ್ನು ಪಡುಬಿದ್ರಿಯ ಬೋರ್ಡು ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News