ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರಿಗೆ ಕತರ್ ಚಾರಿಟಿಯ ಈದ್ ಕಿಟ್ ವಿತರಿಸಲು ನೆರವಾದ ಕ್ಯೂಐಎಸ್ಎಫ್

Update: 2020-08-10 08:02 GMT

ಕತರ್ : ಕೊರೋನ ವೈರಸ್ ದೇಶಾದ್ಯಂತ ವ್ಯಾಪಿಸಿದ ಪರಿಣಾಮವಾಗಿ, ಸುಮಾರು ನಾಲ್ಕುವರೆ ತಿಂಗಳಿನಿಂದ ಕತರ್ ನಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ಅನಿವಾಸಿ ಭಾರತೀಯರಿಗೆ ಈದ್ ಆಚರಿಸಲು  ಕತಾರ್ ಚಾರಿಟಿಯ ಸಹಭಾಗಿತ್ವದಲ್ಲಿ ಕ್ಯೂಐಎಸ್ಎಫ್ ಈದ್ ಕಿಟ್ ವಿತರಿಸುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಯಿತು.

ಆ. 1ರಂದು ಸಂಜೆ ಬಕ್ರೀದ್ ಪ್ರಯುಕ್ತ ಕತರ್ ಚಾರಿಟಿಯು, ಲುಸೈಲ್ ನಲ್ಲಿರುವ ಕಚೇರಿಯಲ್ಲಿ  ಸುಮಾರು 50,000 ಮಂದಿಗೆ ಈದ್ ಕಿಟ್ ಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಯಭಾರಿ ಕಚೇರಿಯ ಅಧಿಕಾರಿಗಳು ಹಾಗೂ ವಿವಿಧ ದೇಶದ ಸಾಮಾಜಿಕ ಸಂಘಟನೆಯ ನೇತಾರರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ, ಕ್ಯೂಐಎಸ್ಎಫ್ ನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಬಶೀರ್ ಅಹ್ಮದ್ ಮತ್ತು ಕ್ಯೂಐಎಸ್ಎಫ್ ನ ಮಾನವೀಯ ಸೇವಾ ಘಟಕದ ಮುಖ್ಯಸ್ಥರಾದ ಲತೀಫ್ ಮಡಿಕೇರಿ ಪಾಲ್ಗೊಂಡಿದ್ದರು.

ಹಲವಾರು ವರ್ಷಗಳಿಂದ  ಸಮಾಜಸೇವೆ ಹಾಗೂ ಮಾನವೀಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಅನಿವಾಸಿ ಭಾರತೀಯರ ಹಾಗೂ ಕತರ್ ನ ವಿವಿಧ ಇಲಾಖೆಗಳ ಅಧಿಕಾರಿಗಳ ಮನಗೆದ್ದ ಕತರ್ ಇಂಡಿಯನ್ ಸೋಷಿಯಲ್ ಫೋರಮ್ (QISF) ಗೆ  ಈದ್ ಕಿಟ್ ವಿತರಿಸುವ ಜವಾಬ್ದಾರಿಯನ್ನು ಕತರ್ ಚಾರಿಟಿ ಹಸ್ತಾಂತರಿಸಿತ್ತು.

ಕತರ್ ಇಂಡಿಯನ್ ಸೋಷಿಯಲ್ ಫೋರಂ ನ  ತಂಡವು ತಮ್ಮ ಅಮೂಲ್ಯವಾದ ಸಮಯವನ್ನು ಸಮಾಜಸೇವೆಗೆ ಮೀಸಲಿಡುವ ಮುಖಾಂತರ, ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮವಾದ ಸುರಕ್ಷಿತ ಅಂತರ ಕಾಪಾಡಿಕೊಂಡು, ಅರ್ಹ ಬಡ ಕುಟುಂಬಗಳಿಗೆ ಹಾಗೂ ಹಲವಾರು ಕಾರ್ಮಿಕರು ನೆಲೆಸಿರುವ   ಕ್ಯಾಂಪುಗಳಿಗೆ ಭೇಟಿ ನೀಡಿ ಈದ್ ಕಿಟ್ ವಿತರಿಸಿತು.

ಕಳೆದ ರಮಝಾನ್ ತಿಂಗಳಿನ ಈದ್ ಉಲ್ ಫಿತರ್ ನಲ್ಲೂ ಈದ್ ಕಿಟ್ ಹಾಗೂ  ಕೋವಿಡ್-19 ರ ಪರಿಹಾರ ಕಿಟ್ ಗಳನ್ನು ಕ್ಯೂಐಎಸ್ಎಫ್ ವಿತರಿಸಿತ್ತು.

ಆ.6ರಂದು ಈದ್ ಕಿಟ್ ವಿತರಿಸಿದ ಕಾರ್ಯಕ್ರಮದಲ್ಲಿ ಕ್ಯೂಐಎಸ್ಎಫ್  ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ನಝೀರ್ ಪಾಷ, ಕ್ಯೂಐಎಸ್ಎಫ್ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕಾರ್ನಾಡ್, ಐಎಫ್ಎಫ್ ನ ಅಯ್ಯೂಬ್ ಉಳ್ಳಾಲ, ಖಾಲೀದ್ ಮುಹ್ಸಿನ್ ಮಂಗಳೂರು, ಇಸ್ಮಾಯಿಲ್ ಕಾಪು ಹಾಗೂ ಕ್ಯೂಐಎಸ್ಎಫ್ ಮಾನವೀಯ ಸೇವಾ ಘಟಕದ ಮುಖ್ಯಸ್ಥ ಲತೀಫ್ ಮಡಿಕೇರಿ ಉಪಸ್ಥಿತರಿದ್ದರು.

ಈದ್ ಕಿಟ್ ವಿತರಿಸುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿ, ಸಹಕರಿಸಿದ ಪ್ರತಿಯೊಬ್ಬರಿಗೂ ಕ್ಯೂಐಎಸ್ಎಫ್ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ನಝೀರ್ ಪಾಷ ವಂದಿಸಿದ್ದಾರೆ. "ಮಾನವೀಯ ಸೇವೆಯೇ ಅತ್ಯುತ್ತಮ ಸೇವೆ" ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಈ ಮಾನವೀಯ ಸಮಾಜ ಸೇವೆಯಲ್ಲಿ ಕೈ ಜೋಡಿಸಿದ ಎಲ್ಲಾ ದೇಶದ ಸಾಮಾಜಿಕ ಸಂಘಟನೆಗಳನ್ನು ಮತ್ತು  ಸಾಮಾಜಿಕ ಸಂಘಟನೆಯ ನೇತಾರರನ್ನು ಕತರ್ ಚಾರಿಟಿಯ ಅಧಿಕಾರಿಗಳು ಪ್ರಶಂಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News