ಬಡ ಯುವತಿಯ ಮದುವೆಗೆ ಆರ್ಥಿಕ ಸಹಾಯ ಮಾಡಿದ ಎಮ್.ಎನ್.ಜಿ. ಫೌಂಡೇಶನ್

Update: 2020-08-10 10:48 GMT

ಮಂಗಳೂರು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಡ ಕುಟುಂಬದ ಮಹಿಳೆಯೊಬ್ಬರು ತನ್ನ ಮಗಳ ಮದುವೆಗಾಗಿ ಆರ್ಥಿಕ ಸಹಾಯ ಮಾಡುವಂತೆ ಸಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದು, ಅದನ್ನು ಅರಿತ ಎಮ್.ಎನ್.ಜಿ. ಫೌಂಡೇಶನ್ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಯುವತಿಯ ಮದುವೆ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಅದರ ಭಾಗವಾಗಿ ಎಮ್.ಎನ್.ಜಿ. ಫೌಂಡೇಶನ್ ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್, ಇನ್ಸ್ಟಗ್ರಾಮ್ ಖಾತೆ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ದಾನಿಗಳ ಸಹಾಯಕ್ಕಾಗಿ ಮನವಿ ಮಾಡಿತ್ತು. ಇದನ್ನು ವಿಶೇಷವಾಗಿ ಪರಿಗಣಿಸಿ, ಸ್ಪಂದಿಸಿದ ದಾನಿಗಳು ಕೇವಲ ಒಂದೂವರೆ ದಿವಸದಲ್ಲಿ ಸುಮಾರು ಒಂಬತ್ತು ಲಕ್ಷದ ಹದಿನಾರು ಸಾವಿರದಷ್ಟು ಮೊತ್ತವನ್ನು ಆ ಕುಟುಂಬದ ಖಾತೆಗೆ ಜಮೆ ಮಾಡಿರುತ್ತಾರೆ.

ಈ ಬಗ್ಗೆ ಸಂಸ್ಥೆಗೆ ಕುಟುಂಬವು ಸಂಪೂರ್ಣ ಮಾಹಿತಿ ನೀಡಿದ್ದು ಹಾಗೂ ಮದುವೆ ಖರ್ಚಿನಲ್ಲಿ ಉಳಿದ ಮೊತ್ತವನ್ನು ಇನ್ಯಾವುದಾದರೂ ಬಡ ಯುವತಿಯ ಮದುವೆ ಖರ್ಚಿಗಾಗಿ ಸಂಸ್ಥೆಗೆ ಹಸ್ತಾಂತರಿಸುವ ಭರವಸೆಯನ್ನು ನೀಡಿರುತ್ತಾರೆ.

ಎಮ್.ಎನ್.ಜಿ. ಫೌಂಡೇಶನ್  ಇತ್ತೀಚಿನ ಲಾಕ್ ಡೌನ್ ಸಂದರ್ಭದಲ್ಲಿ ಜಾತಿ ಮತ ಭೇದವಿಲ್ಲದೆ ಜಿಲ್ಲೆಯಾದ್ಯಂತ ಅರ್ಹ ಬಡ ಕುಟುಂಬಗಳಿಗೆ  ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News