ಕೇರಳ ಚಿನ್ನ ಅಕ್ರಮ ಸಾಗಾಟ ಪ್ರಕರಣ: ಸ್ವಪ್ನಾ ಸುರೇಶ್ ಜಾಮೀನು ತಿರಸ್ಕೃರಿಸಿದ ವಿಶೇಷ ಎನ್‌ಐಎ ನ್ಯಾಯಾಲಯ

Update: 2020-08-10 15:14 GMT

ಕೊಚ್ಚಿ, ಆ. 10: ಕೇರಳದ ಚಿನ್ನ ಅಕ್ರಮ ಸಾಗಾಟ ಪ್ರಕರಣದ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಅವರ ಜಾಮೀನು ಅರ್ಜಿಯನ್ನು ಕೊಚ್ಚಿಯ ವಿಶೇಷ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.

 ಚಿನ್ನ ಅಕ್ರಮ ಸಾಗಾಟ ದೇಶದ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎನ್‌ಐಎಯ ಪ್ರತಿಪಾದನೆಯನ್ನು ನ್ಯಾಯಾಲಯ ಪರಿಗಣಿಸಿದೆ. ಕೇಸ್ ಡೈರಿ ಹಾಗೂ ಪುರಾವೆಗಳ ಆಧಾರದಲ್ಲಿ ಸ್ವಪ್ನಾ ಸುರೇಶ್ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಕಾರ್ಗೋ ಬಿಡುಗಡೆ ಮಾಡುವಲ್ಲಿ ಸ್ವಪ್ನಾ ಸುರೇಶ್ ಹಸ್ತಕ್ಷೇಪ ನಡೆಸಿರುವ ಬಗ್ಗೆ ಪುರಾವೆಗಳು ಇವೆ ಎಂದು ನ್ಯಾಯಾಲಯ ಹೇಳಿದೆ.

ರಾಜತಾಂತ್ರಿಕ ಪಾರ್ಸಲ್‌ನಲ್ಲಿ ಚಿನ್ನವನ್ನು ಹಲವು ಬಾರಿ ಅಕ್ರಮ ಸಾಗಾಟ ಮಾಡಲಾಗಿದೆ ಹಾಗೂ ಇದರಿಂದ ದೇಶದ ಆರ್ಥಿಕ ಭದ್ರತೆಗೆ ಬೆದರಿಕೆ ಇದೆ ಎಂದು ಆರೋಪಿಗೆ ತಿಳಿದಿತ್ತು ಎಂಬ ಬಗ್ಗೆ ಕೇಸ್ ಡೈರಿಯಲ್ಲಿ ಪುರಾವೆಗಳು ಇವೆ ಎಂದು ನ್ಯಾಯಾಲಯ ಗುರುತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News