ಇಡುಕ್ಕಿ ಭೂಕುಸಿತ: ಮತ್ತೆ 6 ಮಂದಿಯ ಮೃತದೇಹ ಪತ್ತೆ; ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆ

Update: 2020-08-10 15:19 GMT

ಪೆಟ್ಟಿಮುಡಿ, ಆ. 10: ನಾಲ್ಕು ದಿನಗಳ ಹಿಂದೆ ಮುನ್ನಾರ್‌ನ ಸಮೀಪದ ರಾಜಮಲೆಯಲ್ಲಿ ಸಂಭವಿಸಿದ ಭೂಕುಸಿತದ ಬಳಿಕ ನಾಪತ್ತೆಯಾದವರಲ್ಲಿ 6 ಮಂದಿ ಚಹಾ ತೋಟದ ಕಾರ್ಮಿಕರ ಮೃತದೇಹವನ್ನು ರಕ್ಷಣಾ ಕಾರ್ಯಕರ್ತರು ಸೋಮವಾರ ಮಣ್ಣಿನ ಅಡಿಯಿಂದ ಹೊರ ತೆಗೆದಿದ್ದಾರೆ.

ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. 22ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ.

ಕಾರ್ಮಿಕರ ಕ್ವಾರ್ಟರ್ಸ್ ಸಮೀಪ ಹರಿಯುವ ಪೆಟ್ಟಿಮುಡಿ ತೊರೆಯ ಸಮೀಪದಿಂದ ಈ ಎಲ್ಲ 6 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಈ ಮೃತದೇಹಗಳು ಕ್ವಾರ್ಟರ್ಸ್‌ನಿಂದ 2 ಕಿ.ಮೀ. ದೂರದಲ್ಲಿ ಪತ್ತೆಯಾಗಿವೆ.

 ಅಗ್ನಿ ಶಾಮಕ ದಳದ ಸ್ಕೂಬಾ ಡೈವಿಂಗ್ ತಂಡ ಸೋಮವಾರ ಬೆಳಗ್ಗೆ ಎರಡು ಮೃತದೇಹಗಳನ್ನು ಪತ್ತೆ ಹಚ್ಚಿತ್ತು. ಅನಂತರ ನಾಲ್ಕು ಮೃತದೇಹಗಳನ್ನು ಪತ್ತೆ ಹಚ್ಚಿತ್ತು ಎಂದು ಜಿಲ್ಲಾಡಳಿತದ ಹೇಳಿಕೆ ತಿಳಿಸಿದೆ.

ಪೆಟ್ಟಿಮುಡಿ ತೊರೆ ಪೆರಿಯಾರ್ ನದಿಯ ಉಪ ನದಿಯಾದ ಮುಥಿರಪುಯ ನದಿಗೆ ಸೇರುತ್ತದೆ. ನೀರಿನೊಂದಿಗೆ ಅವಶೇಷಗಳು ಕೊಚ್ಚಿಕೊಂಡು ಹೋಗಿವೆ. ಈ ಅವಶೇಷಗಳೊಂದಿಗೆ ಕೆಲವರ ಮೃತದೇಹಗಳು ನದಿ ಸೇರಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News