1000 ಕೋ. ರೂ. ಮೌಲ್ಯದ ಡ್ರಗ್ಸ್ ವಶಕ್ಕೆ; ಇಬ್ಬರ ಬಂಧನ

Update: 2020-08-10 16:17 GMT

ಮುಂಬೈ, ಆ.10: ನವಿ ಮುಂಬೈಯ ಬಂದರಿನಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ರವಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 1,000 ಕೋಟಿ ರೂ. ಮೌಲ್ಯದ 191 ಕಿ.ಗ್ರಾಂ ಮಾದಕ ಪದಾರ್ಥವನ್ನು ವಶಕ್ಕೆ ಪಡೆದಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೈಪ್‌ನೊಳಗೆ ತುಂಬಿಸಿ ಈ ಮಾದಕ ಪದಾರ್ಥವನ್ನು ಸಾಗಿಸಲಾಗುತ್ತಿತ್ತು. . ಮಾರುಕಟ್ಟೆಯಲ್ಲಿ ಒಂದು ಕಿ.ಗ್ರಾಂಗೆ 5 ಕೋಟಿ ರೂ. ಮೌಲ್ಯವಿದೆ. ಇದನ್ನು ಅಫಘಾನಿಸ್ತಾನದಿಂದ ಇರಾನ್ ಮೂಲಕ ಭಾರತಕ್ಕೆ ತರಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಪ್ಲಾಸ್ಟಿಕ್ ಪೈಪ್‌ನಲ್ಲಿ ಮಾದಕ ಪದಾರ್ಥವನ್ನು ತುಂಬಿಸಿ ಅದಕ್ಕೆ ಬಿದಿರಿನ ಬಣ್ಣ ಬಳಿದು ಸಾಗಿಸಲಾಗುತ್ತಿತ್ತು. ಆಯುರ್ವೇದ ಔಷಧ ತಯಾರಿಕೆಗೆ ಇದನ್ನು ಬಳಸಲಾಗುತ್ತಿದೆ ಎಂದು ಕಸ್ಟಮ್ಸ್ ತಪಾಸಣೆ ಸಂದರ್ಭ ಆರೋಪಿಗಳು ಅಧಿಕಾರಿಗಳ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News