ಎಸೆಸೆಲ್ಸಿ ಫಲಿತಾಂಶ : ಮೂಡುಬಿದಿರೆಯ ಪ್ರತೀಕ್ಷಾ ನಾಯಕ್ ಗೆ 623 ಅಂಕ

Update: 2020-08-10 18:37 GMT

ಮೂಡುಬಿದಿರೆ: ಇಲ್ಲಿನ ಡಿ.ಜೆ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತೀಕ್ಷಾ ನಾಯಕ್ 625 ರಲ್ಲಿ 623 ಅಂಕಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ಈಕೆ  ಇಂಗ್ಲಿಷ್‍ನಲ್ಲಿ 124, ಸಮಾಜ ವಿಜ್ಞಾನದಲ್ಲಿ 99, ಉಳಿದಂತೆ ಕನ್ನಡ, ಹಿಂದಿ, ವಿಜ್ಞಾನ, ಗಣಿತದಲ್ಲಿ ತಲಾ 100 ಅಂಕ ಪಡೆದಿದ್ದಾಳೆ.   ಈಕೆ ಮೂಲತಃ ಕಾರ್ಕಳ ಎಳ್ಳಾರೆಯ ಪುರಂದರ ಹೆಚ್. ಲೀಲಾವತಿ ಪಿ ದಂಪತಿಯ ಇಬ್ಬರು ಮಕ್ಕಳ ಪೈಕಿ ಹಿರಿಯ ಪುತ್ರಿ.  ಹೀಗೊಂದು ಫಲಿತಾಂಶದ ನಿರೀಕ್ಷೆ ಇತ್ತು. ಸಂತಸವಾಗಿದೆ ಎಂದು ಸಂತಸ ಹಂಚಿಕೊಂಡ ಪ್ರತೀಕ್ಷಾ  ವಿಜ್ಞಾನ ವಿಭಾಗದಲ್ಲಿ ಮುಂದಿನ ಶಿಕ್ಷಣಕ್ಕೆ ಆಸಕ್ತಿ ಹೊಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News