ಎಸೆಸೆಲ್ಸಿ: ಕಾಲಿನಿಂದಲೇ ಪರೀಕ್ಷೆ ಬರೆದು ಶೇ.68 ಅಂಕ ಗಳಿಸಿದ ಬಂಟ್ವಾಳದ ಕೌಶಿಕ್

Update: 2020-08-11 05:30 GMT

ಬಂಟ್ವಾಳ, ಆ.11: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯನ್ನು ಕಾಲಿನ ಬೆರಳುಗಳಿಂದಲೇ ಬರೆದ ವಿದ್ಯಾರ್ಥಿ ಬಂಟ್ವಾಳದ ಕೌಶಿಕ್  424 (ಶೇ.68) ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.

ಶಿಕ್ಷಣ ಸಚಿವರಿಂದ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ಇವರು ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯ ವಿದ್ಯಾರ್ಥಿ. ಕನ್ನಡ ವಿಷಯದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜ ವಿಜ್ಞಾನದಲ್ಲಿ 78 ಅಂಕ ಗಳಿಸಿದ್ದಾರೆ.

 ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್, ಪಿಯುಸಿಯಲ್ಲಿ ವಾಣಿಜ್ಯ ವಿದ್ಯಾಭ್ಯಾಸ ನಡೆಸುವ ಇಚ್ಛೆ ಇದ್ದು, ಇದಕ್ಕೆ ಶಾಸಕ ರಾಜೇಶ್ ನಾಯ್ಕ್ ನೆರವು ನೀಡಿರುವುದಾಗಿ ತಿಳಿಸಿದ್ದಾರೆ.

ಕೌಶಿಕ್ ತನ್ನ ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News