ವಿಶ್ವದ ಮೊದಲ ಕೋವಿಡ್-19 ಲಸಿಕೆಗೆ ರಶ್ಯ ಅನುಮೋದನೆ

Update: 2020-08-11 10:16 GMT

ಮಾಸ್ಕೊ, ಆ.11: ಮಾನವನ ಮೇಲೆ ಪರೀಕ್ಷೆ ನಡೆಸಿ ಎರಡು ತಿಂಗಳೊಳಗೆ ಮಾಸ್ಕೋದ ಗಮಲೇಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಕೋವಿಡ್-19 ಲಸಿಕೆಗೆ ರಶ್ಯದ ಆರೋಗ್ಯ ಸಚಿವಾಲಯ ನಿಯಂತ್ರಕ ಅನುಮೋದನೆ ನೀಡಿದೆ ಎಂದು ಅಧ್ಯಕ್ಷ ವ್ಲಾದಿಮರ್ ಪುಟಿನ್ ಮಂಗಳವಾರ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಸುರಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಕ್ಲಿನಿಕಲ್ ಪ್ರಯೋಗಗಳ ಅಂತಿಮ ಹಂತಗಳು ಮುಂದುವರಿದಿದ್ದರೂ ಸಹ ಈ ಕ್ರಮವು ಸಾಮೂಹಿಕ ಇನಾಕ್ಯುಲೇಶನ್‌ಗೆ ದಾರಿ ಮಾಡಿಕೊಡುತ್ತದೆ. ರಶ್ಯ ತನ್ನ ಲಸಿಕೆಯನ್ನು ಹೊರತರಲು ಸಾಗುತ್ತಿರುವ ವೇಗವು ಪರಿಣಾಮಕಾರಿ ಉತ್ಪನ್ನಕ್ಕಾಗಿ ನಡೆಯುತ್ತಿರುವ ಜಾಗತಿಕ ಸ್ಪರ್ಧೆಯನ್ನು ಗೆಲ್ಲುವ ತನ್ನ ದೃಢನಿಶ್ಚಯವನ್ನು ಎತ್ತಿ ತೋರಿಸುತ್ತಿದೆ. ಆದರೆ,ಇದು ವಿಜ್ಞಾನ ಹಾಗೂ ಸುರಕ್ಷತೆಗೆ ಮುಂಚಿತವಾಗಿ ರಾಷ್ಟ್ರೀಯ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಆತಂಕವನ್ನು ಹುಟ್ಟುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News