ಕಲಿಯುವುದಕ್ಕೆ ವಯಸ್ಸು ಅಡ್ಡಿಯಲ್ಲ: 11ನೇ ತರಗತಿಗೆ ದಾಖಲಾದ ಶಿಕ್ಷಣ ಸಚಿವ

Update: 2020-08-11 16:39 GMT
ಫೋಟೊ ಕೃಪೆ: twitter.com/Jagarnathji_mla

ರಾಂಚಿ,ಆ.11: ಕಲಿಯುವುದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಜಾರ್ಖಂಡ್‌ನ ಶಿಕ್ಷಣ ಸಚಿವ ಜಾಗರನಾಥ ಮಹತೋ (53) ಅವರು ಸಾಬೀತುಗೊಳಿಸಿದ್ದಾರೆ. ಸೋಮವಾರ ಅವರು ತನ್ನ ವಿಧಾನಸಭಾ ಕ್ಷೇತ್ರವಾದ ಬೊಕಾರೊ ಜಿಲ್ಲೆಯ ಡುಮ್ರಿಯ ನವಾಧಿಯಲ್ಲಿನ ದೇವಿ ಮಹತೋ ಸ್ಮಾರಕ ಸರಕಾರಿ ಇಂಟರ್ ಕಾಲೇಜಿನಲ್ಲಿ 11ನೇ ತರಗತಿಗೆ ಕಲಾ ವಿಭಾಗದಲ್ಲಿ ಪ್ರವೇಶವನ್ನು ಪಡೆದುಕೊಂಡಿದ್ದಾರೆ.

ತಾನು ರಾಜ್ಯದ ಶಿಕ್ಷಣ ಸಚಿವನಾಗಿದ್ದು, ಕೇವಲ 10ನೇ ತರಗತಿಯವರೆಗೆ ಓದಿದ್ದರಿಂದ ಹಲವಾರು ಟೀಕೆಗಳನ್ನು ಎದುರಿಸಬೇಕಾಗಿತ್ತು. ಹೀಗಾಗಿ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದ್ದೇನೆ. ಇದು 10ನೇ ತರಗತಿ ಓದಿರುವ ಸಚಿವ ಏನನ್ನು ಸಾಧಿಸಲು ಸಾಧ್ಯ ಎಂದು ಟೀಕಿಸಿದವರಿಗೆ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಮಹತೋ ಹೇಳಿದರು.

1995ರಲ್ಲಿ 10ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದ ಮಹತೋ 11ನೇ ತರಗತಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಜಾರ್ಖಂಡ್‌ನಲ್ಲಿ ಹೊಸದಾಗಿ 4,416 ಶಾಲೆಗಳನ್ನು ಆರಂಭಿಸುವುದಾಗಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News