ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶೇ.100 ಫಲಿತಾಂಶ; ರಾಘವೇಂದ್ರ ಜೋಗಿ ಟಾಪರ್

Update: 2020-08-11 18:33 GMT

ಭಟ್ಕಳ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಆಂಗ್ಲ ಮಾಧ್ಯಮ)ಕ್ಕೆ ಶೇ.100ರಷ್ಟು ಫಲಿತಾಂಶ ಬಂದಿದೆ. 

1 ರಿಂದ 5ನೇ ತರಗತಿಯ ತನಕ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡಿ 6ನೇ ತರಗತಿಗೆ ವಸತಿ ಶಾಲೆಗೆ ಪ್ರವೇಶ ಪಡೆದು ಆಂಗ್ಲ ಮಾಧ್ಯಮದಲ್ಲಿ  10ನೇ ತರಗತಿಯ ವರೆಗೂ ಅಧ್ಯಯನ ಮಾಡಿ ಪರೀಕ್ಷೆಗೆ ಹಾಜರಾದ 41 ವಿದ್ಯಾರ್ಥಿನಿಯರಲ್ಲಿ 41 ವಿದ್ಯಾರ್ಥಿನಿಯರೂ ಪಾಸಾಗಿದ್ದು, 15 ಡಿಸ್ಟಿಂಕ್ಷನ್, 23  ಪ್ರಥಮ ದರ್ಜೆ ಹಾಗೂ 3 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಿಯಾಂಕಾ ರಾಘವೇಂದ್ರ ಜೋಗಿ ಶೇ.97.28. ಕನ್ನಡದಲ್ಲಿ 125ಕ್ಕೆ 125 ಅಂಕ, ಹಿಂದಿಯಲ್ಲಿ 100ಕ್ಕೆ 100 ಅಂಕ,  ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ.  ತೇಜಸ್ವಿನಿ ತಿಮ್ಮಪ್ಪ ಗೌಡ ಶೇ.96.80 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ. ಸಿಂಧು ಮಂಜುನಾಥ ಮೊಗೇರ್ ಶೇ.92.96 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ರಕ್ಷಿತಾ ತಿಮ್ಮಯ್ಯ ನಾಯ್ಕ ಶೇ.92.16, ಗಾಯತ್ರಿ ಸೋಮಯ್ಯ ಗೊಂಡ ಶೇ.91.52 ಅಂಕ ಗಳಿಸಿದ್ದಾರೆ. ಉತ್ತಮ ಸಾಧನೆ ಮಾಡಿ ವಸತಿ ಶಾಲೆಗೆ ಹಾಗೂ ಇಲಾಖೆಗೆ ಕೀರ್ತಿತಂದ ವಿದ್ಯಾರ್ಥಿನಿಯರನ್ನು ಹಾಗೂ ವಸತಿ ಶಾಲೆಯಲ್ಲಿ ಶೇ.100 ಫಲಿತಾಂಶ ಬರುವಲ್ಲಿ ಶ್ರಮಿಸಿದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳನ್ನುಪ್ರಾಂಶುಪಾಲ ರಮೇಶ ಕೆ. ನಾಯ್ಕ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುರುಷೋತ್ತಮ ಎಸ್. ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News