ಶಾಸಕರು ಅಸಮಾಧಾನಗೊಳ್ಳುವುದು ಸಹಜ: ಅಶೋಕ್ ಗೆಹ್ಲೋಟ್

Update: 2020-08-12 07:03 GMT

ಹೊಸದಿಲ್ಲಿ/ಜೈಪುರ,ಆ.12: ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಅಂತ್ಯವಾಗಿದೆ ಎಂದು ಕಾಂಗ್ರೆಸ್ ಪ್ರಕಟಿಸಿದ ಎರಡು ದಿನಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "ಶಾಸಕರು ಅಸಮಾಧಾನವಾಗುವುದು ಸಹಜ. ನಮ್ಮಿಂದ ದೂರವಾಗಿದ್ದ ಸೇಹಿತರು ಈಗ ವಾಪಸಾಗಿದ್ದಾರೆ. ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ'' ಎಂದರು.

 ಮಂಗಳವಾರ ಸಂಜೆ ಜೈಸಲ್ಮೇರ್‌ನ ಹೊಟೇಲ್‌ನಲ್ಲಿರುವ ಶಾಸಕರನ್ನು ಭೇಟಿಯಾದ ಗೆಹ್ಲೋಟ್, "ಶಾಸಕರು ಅಸಮಾಧಾನಗೊಳ್ಳುವುದು ಸಹಜ.ಈ ಪ್ರಸಂಗ ಸಂಭವಿಸಿದ ರೀತಿ, ಅವರು ತಂಗಿರುವ ರೀತಿ ಸಹಜವಾಗಿದೆ.  ನಾವು ರಾಷ್ಟ್ರ, ರಾಜ್ಯದಲ್ಲಿ ಜನರ ಸೇವೆ ಮಾಡಿ, ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕಾದರೆ, ಕೆಲವೊಮ್ಮೆ ನಾವು ಸಹಿಸಿಕೊಳ್ಳಬೇಕಾದ ಅಗತ್ಯವಿರುತ್ತದೆ ಎಂದು ಹೇಳಿದ್ದೇನೆ. ನಮ್ಮಿಂದ ಮುನಿಸಿಕೊಂಡವರು ವಾಪಸಾಗಿದ್ದಾರೆ. ನಾವೀಗ ಒಟ್ಟಿಗೆ ಕೆಲಸ ಮಾಡುವ ಮೂಲಕ ಭಿನ್ನಾಭಿಪ್ರಾಯ ಹೋಗಲಾಡಿಸಿಕೊಳ್ಳಬೇಕಾಗಿದೆ.ಈ ಮೂಲಕ ಬಿಜೆಪಿಗೆ ಪ್ರಜಾಪ್ರಭುತ್ವವನ್ನು ಕೊಲ್ಲಲು ನಾವು ಅವಕಾಶ ನೀಡಬಾರದು'' ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರ ರಾಹುಲ್ ಗಾಂಧಿಹಾಗೂ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದ ಸಚಿನ್ ಪೈಲಟ್ ತಿಂಗಳ ಹಿಂದೆ ಘೋಷಿಸಿದ್ದ ಬಂಡಾಯವನ್ನು ಕೈಬಿಟ್ಟಿದ್ದರು. ಬಂಡಾಯ ಎದ್ದ ಬಳಿಕ ಮೊದಲ ಬಾರಿ ಮಂಗಳವಾರ ಪೈಲಟ್ ಜೈಪುರಕ್ಕೆ ವಾಪಸಾಗಿದ್ದರು. ಗೆಹ್ಲೋಟ್ ಜೈಸಲ್ಮೇರ್‌ನಲ್ಲಿದ್ದಾರೆ. ಈ ಇಬ್ಬರು ನಾಯಕರು ಶುಕ್ರವಾರದಿಂದ ಆರಂಭವಾಗಲಿರುವ ರಾಜ್ಯ ವಿಶೇಷ ಅಧಿವೇಶನಕ್ಕಿಂತ ಮೊದಲು ಭೇಟಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News