ಭಾರತದಲ್ಲಿ ದೈನಂದಿನ ಕೊರೋನ ಕೇಸ್‌ಗಳಲ್ಲಿ ಹೊಸ ದಾಖಲೆ

Update: 2020-08-13 05:46 GMT

ಹೊಸದಿಲ್ಲಿ, ಆ.13: ಭಾರತದಲ್ಲಿ ಇದೇ ಮೊದಲ ಬಾರಿ ಒಂದೇ ದಿನ 66,999 ಕೋವಿಡ್-19 ಕೇಸ್‌ಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 23,96,637 ಕ್ಕೇರಿಕೆಯಾಗಿದೆ.

ಇದೇ ವೇಳೆ ಚೇತರಿಕೆ ಪ್ರಮಾಣ ಶೇ.70.76ಕ್ಕೇರಿಕೆ. ಸಾಂಕ್ರಾಮಿಕ ರೋಗದಿಂದ ಈ ತನಕ 16,95,982 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಸರಕಾರ ಇಂದು ಬಿಡುಗಡೆ ಮಾಡಿರುವ ಅಂಕಿ-ಅಂಶದಿಂದ ತಿಳಿದುಬಂದಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 942 ರೋಗಿಗಳು ಸಾವನ್ನಪ್ಪಿದ್ದಾರೆ.ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 47,033ಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತವು ಅಮೆರಿಕ ಹಾಗೂ ಬ್ರೆಝಿಲ್ ಬಳಿಕ ವಿಶ್ವದಲ್ಲಿ ಹೆಚ್ಚು ಕೊರೋನ ಸೋಂಕಿತರ ದೇಶವಾಗಿದೆ. ಜಾಗತಿಕವಾಗಿ 20 ಮಿಲಿಯನ್ ಜನರಿಗೆ ಕೊರೋನ ವೈರಸ್ ತಗಲಿದ್ದು, ಈ ಪೈಕಿ 747,845 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅತ್ಯಂತ ಹೆಚ್ಚು ಜನರು ಕೊರೋನಕ್ಕೆ ಬಲಿಯಾಗಿದ್ದು, ಆ ನಂತರ ಬ್ರೆಝಿಲ್ ಹಾಗೂ ಭಾರತ ದೇಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News