ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ

Update: 2020-08-13 08:25 GMT

 ಹೊಸದಿಲ್ಲಿ, ಆ.13: ದೇಶದ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಪಾರದರ್ಶಕ ತೆರಿಗೆ ವೇದಿಕೆಗೆ ಚಾಲನೆ ನೀಡಿದರು. ಪಾರದರ್ಶಕ ತೆರಿಗೆ ಹಾಗೂ ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ ಹಾಗೂ ಅವರನ್ನು ಉತ್ತೇಜಿಸುವ ಉದ್ದೇಶದಿಂದ ಈ ವೇದಿಕೆಯನ್ನು ಪ್ರಾರಂಭಿಸಲಾಗಿದೆ.

ತೆರಿಗೆದಾರರ ಚಾರ್ಟರ್ ಹಾಗೂ ಮುಖರಹಿತ ವೌಲ್ಯಮಾಪನವನ್ನು ಗುರುವಾರ ಪ್ರಧಾನಿ ಅನಾವರಣಗೊಳಿಸಿದರು. ಮುಖರಹಿತ ಮನವಿ ಸೌಲಭ್ಯ ದೇಶದ ಎಲ್ಲ ನಾಗರಿಕರಿಗೆ ಸೆಪ್ಟಂಬರ್ 25ರಂದು ಲಭ್ಯವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.

  "ದೇಶದ ಪ್ರಾಮಾಣಿಕ ತೆರಿಗೆದಾರನು ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ. ಅವರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರಾಮಾಣಿಕ ತೆರಿಗೆ ಪಾವತಿ ಎಲ್ಲರ ಕರ್ತವ್ಯ. ತೆರಿಗೆ ವಂಚನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಪ್ರಾಮಾಣಿಕ ತೆರಿಗೆದಾರರನ್ನು ಸರಕಾರ ಗುರುತಿಸಿ ಗೌರವಿಸುತ್ತದೆ. ಇಂದು ಪ್ರಾರಂಭಿಸಲಾಗಿರುವ ಹೊಸ ಸೌಲಭ್ಯಗಳು ಪ್ರಾಮಾಣಿಕರನ್ನು ಗೌರವಿಸುವ ಸರಕಾರದ ಬದ್ಧತೆಯನ್ನು ಬಲಪಡಿಸುತ್ತದೆ'' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News