ಮುಂಬೈ ಕನಸು ನನಸಾಗಿಸಲು ಎರಡು ತಿಂಗಳ ಕಂದನನ್ನೇ ಮಾರಿದ್ದ ತಾಯಿ

Update: 2020-08-13 16:07 GMT

ಹೈದರಾಬಾದ್,ಆ.13: ಮುಂಬೈಗೆ ಹೋಗುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು 22ರ ಹರೆಯದ ಯುವತಿಯೋರ್ವಳು ತನ್ನ ಎರಡು ತಿಂಗಳು ಪ್ರಾಯದ ಗಂಡುಮಗುವನ್ನು 45,000 ರೂ.ಗಳಿಗೆ ಮಾರಾಟ ಮಾಡಿದ್ದ ಘಟನೆ ಇಲ್ಲಿಯ ಹಬೀಬಾನಗರದಲ್ಲಿ ನಡೆದಿದ್ದು, ಯುವತಿ ಹಾಗೂ ಮಗುವನ್ನು ಖರೀದಿಸಿದ್ದ ಕುಟುಂಬ ಮತ್ತು ವ್ಯವಹಾರವನ್ನು ಕುದುರಿಸಿದ್ದ ಮಧ್ಯವರ್ತಿ ಸೇರಿದಂತೆ ಇತರ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ದೂರು ದಾಖಲಾದ 24 ಗಂಟೆಗಳಲ್ಲಿಯೇ ಮಗುವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪತಿ ಅಬ್ದುಲ್ ಮುಜಾಹೀದ್ ಜೊತೆಗೆ ಕ್ಷುಲ್ಲಕ ವಿಷಯಕ್ಕಾಗಿ ಜಗಳವಾಡಿದ್ದ ಶೇಖ್ ರೆಯಾ ಖಾನ್ ಒಂಟಿಯಾಗಿ ವಾಸವಿದ್ದಳು. ಮುಂಬೈಗೆ ಹೋಗಬೇಕು ಎಂದು ಹಿಂದಿನಿಂದಲೂ ಕನಸು ಕಾಣುತ್ತಿದ್ದ ಆಕೆಗೆ ಏಕಾಂಗಿಯಾಗಿ ಮಗುವಿನ ಪೋಷಣೆ ಕಷ್ಟವಾಗಿತ್ತು. ಇದೇ ಕಾರಣದಿಂದ ಮಗು ಶೇಖ್ ಅದ್ನಾನ್‌ನನ್ನು ಮಾರಾಟ ಮಾಡಲು ಆಕೆ ನಿರ್ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಪತ್ನಿ ಮಗುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂಬ ಮಾಹಿತಿ ಪಡೆದ ಅಬ್ದುಲ್ ಮುಜಾಹೀದ್ ಮಂಗಳವಾರ ಪೊಲೀಸರ ಮೊರೆ ಹೋಗಿದ್ದ ಪೊಲೀಸರು ಈಗ ಮಗುವನ್ನು ತಂದೆಯ ವಶಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News