ಬಿ.ಕೆ. ವಿಶಾಲರಿಗೆ ಅತ್ಯುತ್ತಮ ಸಾಮುದಾಯಿಕ ಮುಂದಾಳು ಪ್ರಶಸ್ತಿ

Update: 2020-08-14 10:38 GMT

ಮಂಗಳೂರು, ಆ.14: ಸಾರ್ವಜನಿಕ ನೀತಿಯ ಅಂತರಾಷ್ಟ್ರೀಯ ಸಂಸ್ಥೆ (ಐಐಪಿಪಿ) ನೀಡುವ 2019-20ನೇ ಸಾಲಿನ ಅತ್ಯುತ್ತಮ ಸಾಮುದಾಯಿಕ ಮುಂದಾಳು ಪ್ರಶಸ್ತಿಗೆ ನಗರದ ಸಂತ ಆಗ್ನೇಸ್ (ಸ್ವಾಯತ್ತ) ಕಾಲೇಜಿನ ಪ್ರಧಾನ ಗ್ರಂಥಾಲಕಿ ಡಾ. ಬಿ.ಕೆ ವಿಶಾಲ ಆಯ್ಕೆಯಾಗಿದ್ದಾರೆ.

ಆ. 15ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಐಐಪಿಪಿ ಕುಟುಂಬ ಸಂಸ್ಥೆಯ ಪ್ರವರ್ತಕರಾದ ಮ್ಯಾಕ್ಸ್ ರಸ್ಕೀನಾ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಸ್ಮರಣ ಫಲಕವನ್ನು ಒಳಗೊಂಡಿದೆ. ಈ ಸಂಸ್ಥೆಯು 20 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು, ಭಾರತದ ಉತ್ಸಾಹಿ ಪ್ರತಿಭಾವಂತರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೇಶದ ಸಾಮಾಜಿಕ, ಔದ್ಯಮಿಕ ಪರಿಸರವನ್ನು ಉತ್ತಮಗೊಳಿಸಲು ಉತ್ತೇಜಿಸುವ ಉದ್ದೇಶ ಹೊಂದಿದೆ. ಇದು ಯು.ಎಸ್.ಎ.ಯಲ್ಲಿರುವ ಅನಿವಾಸಿ ಭಾರತೀಯ ಕುಟುಂಬದ ಸಂಸ್ಥೆಯಾಗಿದೆ.

ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಗ್ರಂಥಾಲಯ ಕ್ಷೇತ್ರವನ್ನೇ ಗಮನದಲ್ಲಿಟ್ಟುಕೊಳ್ಳಲಾಗಿತ್ತು. ಡಾ. ಬಿ.ಕೆ. ವಿಶಾಲ ಅವರು ಕಳೆದ 34 ವರ್ಷಗಳಿಂದ ಸಂತ ಆಗ್ನೆಸ್ ಕಾಲೇಜಿನ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವುದರೊಂದಿಗೆ ಡಿಜಿಟಲ್ ಯುಗದ ಜ್ಞಾನ ಮೈಗೂಡಿಸಿಕೊಂಡು ಅದಕ್ಕನುಗುಣವಾಗಿ ಕಾಲಕಾಲಕ್ಕೆ ಗ್ರಂಥಾಲಯದ ಉನ್ನತೀಕರಣ ಮಾಡುತ್ತಾ ಬ್ಲಾಗ್, ಈ-ಜರ್ನಲ್‌ಗಳನ್ನು ಪರಿಚಯಿಸುತ್ತಾ, ಪ್ರಕಟಿಸುತ್ತಾ ಬಂದಿದ್ದಾರೆ.

ಗ್ರಂಥಪಾಲಕಿಯ ಹುದ್ದೆಯೊಂದಿಗೇ ಹಲವು ಶೈಕ್ಷಣಿಕ ಸಂಘ ಸಂಸ್ಥೆಗಳ ಪದಾಧಿಕಾರದ ಹೊಣೆಯನ್ನೂ ಅವರು ನಿರ್ವಹಿಸುತ್ತಿದ್ದಾರೆ. ದ.ಕ. ಕೊಡಗು ಜಿಲ್ಲಾ ಗ್ರಂಥಾಲಯ ಸಂಘದ ಕಾರ್ಯದರ್ಶಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಅನುದಾನಿತ ಕಾಲೇಜುಗಳ ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನದ (RUSA) ಸಂಯೋಜಕಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಕಾಲೇಜು ಅಧ್ಯಾಪಕರ ಸಂಘ ಅಮುಕ್ ತಿನ ಪಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಪದವಿ ಕಾಲೇಜು ಅಧ್ಯಾಪಕರ ಸಂಘ ಪುಕ್‌ತಕ್‌ನ ಜಂಟಿ ಕಾರ್ಯದರ್ಶಿ ಮೊದಲಾದ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ಕೊಡಮಾಡುವ ಕಲಾ ರಾಷ್ಟ್ರೀಯ ಪ್ರಶಸ್ತಿಗೆ 2013ರಲ್ಲಿ ಪಾತ್ರರಾಗಿದ್ದು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪಂಗಡಗಳ ಗ್ರಂಥಪಾಲಕರ ಸಂಘ ಕೊಡಮಾಡುವ ಅತ್ಯುತ್ತಮ ಗ್ರಂಥಪಾಲಕಿ ಪ್ರಶಸ್ತಿಗೆ 2014ರಲ್ಲಿ ಭಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News