ಆ.16ರಿಂದ ಪಿಲಿಕುಳ ಮೃಗಾಲಯ ಸಾರ್ವಜನಿಕ ಸಂದರ್ಶನಕ್ಕೆ ಮುಕ್ತ

Update: 2020-08-14 11:15 GMT

ಮಂಗಳೂರು, ಆ.14: ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲ್ಪಟ್ಟಿದ್ದ ಪಿಲಿಕುಳದ ಮೃಗಾಲಯವು ಆ. 16ರಿಂದ ಸಾರ್ವಜನಿಕ ಸಂದರ್ಶನಕ್ಕೆ ತೆರೆಯಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿದೇಶರ್ಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೃಗಾಲಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ಪ್ರವೇಶಕ್ಕೆ ತೆರೆದಿರುತ್ತದೆ. ಆದರೆ ಹಿಂದಿನಂತೆಯೇ ಪ್ರತಿ ಸೋಮವಾರ ಮೃಗಾಲಯದ ನಿರ್ವಹಣೆಗಾಗಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕೋವಿಡ್ ಬಗ್ಗೆ ಜಿಲ್ಲಾಡಳಿತ ನೀಡುತ್ತಿರುವ ಆದೇಶಗಳನ್ನು ಕಡ್ಡಾಯ ವಾಗಿ ಪಾಲಿಸಬೇಕು. ಸಂದರ್ಶಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕಾನಿಂಗ್ ನಡೆಸಲಾಗುವುದು. ಕೈಗಳನ್ನು ಸ್ಯಾನಿಟೈಸ್ ಮಾಡಲಾಗವುದು. ಮೃಗಾಲಯದ ಒಳಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮೃಗಾಲಯದಲ್ಲಿ 76 ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುತ್ತಿದೆ. ಟಿಕೆಟ್ ಪ್ರವೇಶ ದ್ವಾರದ ಕಚೇರಿಯಲ್ಲಿಯೇ ನೀಡಲಾಗುವುದು. ಮೃಗಾಲಯ ಎದುರುಗಡೆ ನಿಗದಿಪಡಿಸಿದ ಪ್ರದೇಶದಲ್ಲಿ ಮಾತ್ರವೇ ವಾಹನ ನಿಲುಗಡೆಗೆ ಅನುಮತಿ ನೀಡಲಾಗಿದೆ ಎಂದು ನಿರ್ದೇಶಕರಾದ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News