ಪ್ರಧಾನಿಗಳ ಪೈಕಿ ಅತ್ಯಂತ ಸುದೀರ್ಘ ಕಾಲ ಚುನಾಯಿತ ಸರಕಾರದ ಮುಖ್ಯಸ್ಥನೆಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ

Update: 2020-08-14 13:06 GMT

ಹೊಸದಿಲ್ಲಿ: ದೇಶದಲ್ಲಿ ಅತ್ಯಂತ ದೀರ್ಘಾವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿರುವ ಕಾಂಗ್ರೆಸ್ಸೇತರ ಸರಕಾರದ ಪ್ರಧಾನಿಯಾಗಿದ್ದಾರೆಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.  ಅದೇ ಸಮಯ ಇನ್ನೊಂದು ಶ್ರೇಯವನ್ನೂ ಅವರು ತಮ್ಮದಾಗಿಸಿದ್ದಾರೆ. ಚುನಾಯಿತ ಸರಕಾರವೊಂದರ ಮುಖ್ಯಸ್ಥರಾಗಿ ಅತ್ಯಂತ ದೀರ್ಘ ಆಡಳಿತ ನಡೆಸಿದವರೂ ಅವರಾಗಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಅವರು 12 ವರ್ಷ ಸೇವೆ ಸಲ್ಲಿಸಿರುವುದು ಈ ಹೆಗ್ಗಳಿಕೆಗೆ ಕಾರಣ.

ಸರಕಾರವೊಂದರ ಮುಖ್ಯಸ್ಥರಾಗಿ ನರೇಂದ್ರ ಮೋದಿ 18 ವರ್ಷ 306 ದಿನಗಳು (ಸಿಎಂ ಆಗಿದ್ದ ಅವಧಿಯೂ ಸೇರಿ) ಅಂದರೆ ಆಗಸ್ಟ್ 13ರ ತನಕ 6,878 ದಿನಗಳ ಕಾಲ ಸೇವೆ ಸಲ್ಲಿಸಿದ್ದರೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿ 16 ವರ್ಷ ಹಾಗೂ 286 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ 15 ವರ್ಷ ಹಾಗೂ 350 ದಿನಗಳ ಕಾಲ ಸೇವೆ ಸಲ್ಲಿಸಿದ್ದರು.

ಪಶ್ಚಿಮ ಬಂಗಾಳದ ಜ್ಯೋತಿ ಬಸು ಹಾಗೂ ಸಿಕ್ಕಿಂನ ಪವನ್ ಕುಮಾರ್ ಚಮ್ಲಿಂಗ್ ಅವರು ಚುನಾಯಿತ ರಾಜ್ಯ ಸರಕಾರದ ಮುಖ್ಯಸ್ಥರಾಗಿ ಮೋದಿಗಿಂತಲೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದರೂ ಅವರ್ಯಾರಿಗೂ ಪ್ರಧಾನಿಯಾಗುವ ಅವಕಾಶ ದೊರಕಿರಲಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯನ್ನು ದಾಟಿ ಮೋದಿ ದೇಶದ ನಾಲ್ಕನೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂದು ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News