ಪೊಲೀಸ್ ಶೌರ್ಯ ಪದಕ ಪಟ್ಟಿಯಲ್ಲಿ ಜಮ್ಮುಕಾಶ್ಮೀರ ಟಾಪ್

Update: 2020-08-14 16:54 GMT

ಜಮ್ಮುಕಾಶ್ಮೀರ, ಆ. 14: ಗೃಹ ಸಚಿವಾಲಯ ಶುಕ್ರವಾರ ಪ್ರಕಟಿಸಿದ ಪೊಲೀಸ್ ಶೌರ್ಯ ಪದಕದಲ್ಲಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ ಗರಿಷ್ಠ ಪದಕಕ್ಕೆ ಆಯ್ಕೆಯಾಗಿದೆ.

ಗೃಹ ಸಚಿವಾಲಯ 215 ಪೊಲೀಸ್ ಶೌರ್ಯ ಪದಕಗಳನ್ನು ಪ್ರಕಟಿಸಿದ್ದು, ಅದರಲ್ಲಿ ಶೇ. 57 ಶೌರ್ಯ ಪದಕಗಳನ್ನು ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಗಾಗಿ ನೀಡಲಾಗಿದೆ. ಜಮ್ಮು ಹಾಗೂ ಕಾಶ್ಮೀರದ 81 ಪೊಲೀಸರು ಸಿಆರ್‌ಪಿಎಫ್‌ನ 55 ಪೊಲೀಸರು ಶೌರ್ಯ ಪದಕಕ್ಕೆ ಪಾತ್ರರಾಗಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ 81 ಪೊಲೀಸ್ ಅಧಿಕಾರಿಗಳಲ್ಲಿ ಸಂದೀಪ್ (ಎಸ್‌ಎಸ್‌ಪಿ ಅನಂತ್‌ನಾಗ್), ಗುರಿಂದರ್‌ಪಾಲ್ ಸಿಂಗ್ (ಎಸ್‌ಪಿ ಕುಲ್ಗಾಂವ್) ಹಾಗೂ ಅತುಲ್ ಕುಮಾರ್ ಗೋಯಲ್ (ಡಿಐಜಿ ದಕ್ಷಿಣ ಕಾಶ್ಮೀರ) ಸೇರಿದ್ದಾರೆ.

ವಿಶೇಷವೆಂದರೆ ಕಳಂಕಿತ ಕಾಶ್ಮೀರ ಪೊಲೀಸ್ ಡಿಎಸ್‌ಪಿ ದವೀಂದರ್ ಸಿಂಗ್‌ರನ್ನು ವಶಕ್ಕೆ ತೆಗೆದುಕೊಂಡಿದ್ದ ಡಿಐಜಿ ಅತುಲ್ ಕುಮಾರ್ ಗೋಯಲ್ ಅವರು ಕೂಡ ಶೌರ್ಯ ಪದಕಕ್ಕೆ ಆಯ್ಕೆಯಾಗಿದ್ದಾರೆ. 2017ರಲ್ಲಿ ಲಕ್ನೋದಲ್ಲಿ ಐಸಿಸ್ ನಿರ್ವಾಹಕ ಸೈಫುಲ್ಲಾ ಖಾನ್ ವಿರುದ್ಧ ಕಾರ್ಯಾಚರಣೆ ನಡೆಸಿದ ಸಂದರ್ಭ ಉತ್ತರಪ್ರದೇಶದ ತಂಡದ ನೇತೃತ್ವ ವಹಿಸಿದ್ದ ಅಸೀಮ್ ಅರುಣ್ ಅವರು ಕೂಡ ಶೌರ್ಯ ಪದಕಕ್ಕೆ ಬಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News