ದೇಶದ ಸಂವಿಧಾನ, ಧಾರ್ಮಿಕ ಸಂದೇಶದಿಂದ ಬಲಿಷ್ಟ ಭಾರತ ನಿರ್ಮಾಣ ಸಾಧ್ಯ-ರಶೀದ್ ಹಾಜಿ

Update: 2020-08-15 17:39 GMT

ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿ ಆವರಣದಲ್ಲಿ ಆಚರಿಸಲಾಯಿತು. ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಧ್ವಜಾರೋಹಣಗೈದರು.

ದರ್ಗಾ ಅಧ್ಯಕ್ಷರು ಮಾತಾಡಿ, 73ವರ್ಷಗಳ ಹಿಂದೆ ನಮ್ಮ ಹಿರಿಯ ನೇತಾರರು, ಜಾತಿ ಮತ ಬೇಧ ಮರೆತು ದೊರಕಿಸಿಕೊಟ್ಟ ಸ್ವಾತಂತ್ರ್ಯವು ನಮ್ಮ ಕೈಯಿಂದ ತಪ್ಪಿಹೋಗುವ ಸನ್ನಿಹದಲ್ಲಿದೆ, ಅಂಬೇಡ್ಕರ್‍ರವರ ಸಂವಿಧಾನ, ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ಪೈಗಂಬರರ ಪವಿತ್ರ ಸಂದೇಶ ಇವತ್ತಿನ ದಿನಗಳಲ್ಲಿ ಕಣ್ಮರೆ ಅಂಚಿನಲ್ಲಿ ಸಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಕೋಮುವಾದ, ಮತೀಯವಾದ, ಭಯೋತ್ಪಾದಕ ಕೃತ್ಯಗಳು ನಡೆಯುವಂತಹ ಈ ಸಂದರ್ಭ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗಮಯಿಗಳಿಗೆ  ಅಪಚಾರವಾಗಿದೆ, ಕೊರೋನ ರೋಗದಿಂದ ತತ್ತರಿಸಿದ ಭಾರತೀಯರು ತಮ್ಮ ವ್ಯಾಪಾರ ವಹಿವಾಟು ಶಿಕ್ಷಣ ಸಂಸ್ಥೆಗಳು ಲಾಕ್ ಡೌನಿಂದ ಮುಚ್ಚಲ್ಪಟ್ಟು ಭಯಬೀತರಾದ ಸನ್ನಿವೇಶ, ಸ್ವಾತಂತ್ರ್ಯ ಪೂರ್ವದ ಲಾಕ್ ಡೌನಂತಿನ ಸಂದರ್ಭವನ್ನು ನೆನೆದಾಗ ಸ್ವಾತಂತ್ರ್ಯ ದೊರೆತ ಮೇಲೆ ನಾವೆಷ್ಟು ಪುಣ್ಯವಂತರು, ಭಾಗ್ಯವಂತರು ಎಂಬುವುದನ್ನು ಅರ್ಥ ಮಾಡುವ ಸಂದರ್ಭ ಕೂಡ ಆಗಿದೆ, ಮನುಷ್ಯ ವರ್ಗವು ದಾರಿ ತಪ್ಪಿದಾಗ ಸೃಷ್ಟಿಕರ್ತನು ಜನರ ಮೇಲೆ ಶಿಕ್ಷೆಯ ರೂಪದಲ್ಲಿ ಕೊರೋನ ವೈರಸನ್ನು ನಮಗೆ ನೀಡುವುದರ ಮೂಲಕ ನಿನ್ನ ಸ್ವಂತಿಕೆ ಏನೂ ಇಲ್ಲ, ಸೃಷ್ಟಿಕರ್ತನ ಕಾರ್ಯವಾಗಿದೆ ಎಂಬುವುದನ್ನು ಮನದಟ್ಟು ಮಾಡುತ್ತದೆ. ಆದರಿಂದ ಈ 74ನೇ ಸ್ವಾತಂತ್ರ್ಯದ ಸಂದರ್ಭದ ದಿನ ಕೊರೋನ ಮುಕ್ತರಾಗಿ ದೇಶಾಧ್ಯಂತ ಸೌಹಾರ್ದತೆಯ, ಸಾಮರಸ್ಯದ ದೇಶವಾಗಿ ಉಳಿಯಲು ನಾವೆಲ್ಲಾ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸೋಣ ಹಾಗೆಯೇ ಸಂವಿದಾನ, ಪ್ರವಾದಿ ಸಂದೇಶ ಹಾಗೂ ಎಲ್ಲಾ ಧರ್ಮದ, ಧರ್ಮಗುರುಗಳ ಪರಿಪಾಟದಂತೆ ಬದುಕಿ ಈ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಿ, ಬಲಿಷ್ಟ ಭಾರತ ನಿರ್ಮಾಣಮಾಡೋಣ ಎಂದರು.

ಸ್ವಾತಂತ್ರ್ಯೋತ್ಸವ ಪ್ರಯುಕ್ತ ದರ್ಗಾ, ಟ್ರಸ್ಟ್ ಸಮೂಹ ಸಂಸ್ಥೆಗಳಾದ, ಟಿಪ್ಪು ಸುಲ್ತಾನ್ ಶಾಲೆ ಕೋಟೆಪುರ, ಹಝ್ರತ್ ಶಾಲೆ ಉಳ್ಳಾಲ, ಹಝ್ರತ್ ಹೆಣ್ಣುಮಕ್ಕಳ ಪ್ರೌಢ ಶಾಲೆ ಮತ್ತು ಕಾಲೇಜು ಆಝಾದ್ ನಗರ, ಟಿಪ್ಪು ಸುಲ್ತಾನ್ ಕಾಲೇಜು ಒಂಬತ್ತುಕೆರೆ, ಐ.ಟಿ.ಐ, ಸಯ್ಯಿದ್ ಮದನಿ ಶಾಲೆ ಹಳೆಕೋಟೆ, ಹಝ್ರತ್ ಕಲ್ಲಾಪು ಶಾಲೆ, ಹಝ್ರತ್ ಅಳೇಕಲ ಶಾಲೆಯಲ್ಲಿ ಧ್ವಜಾರೋಹಣಗೈದರು.

ಈ ಸಂದರ್ಭದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಅಡಿಟರ್ ಯು.ಟಿ ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಯು.ಕೆ ಇಬ್ರಾಹೀಮ್, ಜತೆ ಕಾರ್ಯದರ್ಶಿ ಎ.ಕೆ ಮೊಹಿಯದ್ದೀನ್ ಹಾಜಿ, ಅರಬಿಕ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಹಸೈನಾರ್, ಅಲಿಮೋನು, ಖಾದರ್ ಮೊಯ್ಲಾರ್, ಅಬೂಬಕ್ಕರ್ ಅಲಿನಗರ, ಕುಂಞಿ ಮೋನು ಅಕ್ಕರೆಕರೆ, ಶಾಲಾ ಕಾಲೇಜು ಶಿಕ್ಷಕರು, ಮತ್ತಿತ್ತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News