ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಭಾರತದ ಜತೆಗಿನ ಬಾಂಧವ್ಯ ಮುಂದುವರಿಸಲಾಗುವುದು: ಜೊ ಬಿಡೆನ್

Update: 2020-08-16 04:53 GMT

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗಿ ತಾವು ಆಯ್ಕೆಯಾದಲ್ಲಿ ಭಾರತದ ಜತೆಗಿನ ವಿಶೇಷ ಬಾಂಧವ್ಯ ಮುಂದುವರಿಸುವುದಾಗಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ  ಜೊ ಬಿಡೆನ್ ಘೋಷಿಸಿದ್ದಾರೆ. ಜತೆಗೆ ಅಕ್ರಮ ವಲಸೆ ತಡೆಯವ ನಿಟ್ಟಿನಲ್ಲಿ ಟ್ರಂಪ್ ಸರ್ಕಾರ ಕೈಗೊಂಡ ಎಚ್1ಬಿ ವೀಸಾ ನಿರ್ಧಾರ ದಿಢೀರ್ ಹಾಗೂ ಹಾನಿಕಾರಕ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೌತ್ ಏಷ್ಯನ್ಸ್ ಫಾರ್ ಬಿಡೆನ್ ‌ಎಂಬ ವಿಶೇಷ ಸಮಾರಂಭದಲ್ಲಿ ಮಾತನಾಡಿದ ಮಾಜಿ ಉಪಾಧ್ಯಕ್ಷರು ಭಾರತೀಯ ಅಮೆರಿಕನ್ನರಿಗೆ ಮತ್ತು ವಿಶ್ವಾದ್ಯಂತ ಇರುವ ಭಾರತೀಯರಿಗೆ ಸ್ವಾತಂತ್ರ್ಯ ದಿನೋತ್ಸವದ ಶುಭ ಹಾರೈಸಿದರು. ದೆಹಲಿ ಹಾಗೂ ವಾಷಿಂಗ್ಟನ್ ಹಲವು ವರ್ಷದಿಂದ ಆಳವಾದ ಹಾಗೂ ವಿಶೇಷ ಬಾಂಧವ್ಯ ಹೊಂದಿವೆ ಎಂದು ಬಣ್ಣಿಸಿದರು.

ಭಾರತದ ಸ್ವಾತಂತ್ರ್ಯೋತ್ಸವ ಶುಭಾಶಯಗಳು. ಹಲವು ವರ್ಷಗಳಿಂದ ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಆಳವಾಗಿ ಬೆಳೆದು ಬಂದಿರುವುದನ್ನು ಅಮೆರಿಕದ ಸೆನೆಟ್ ಸದಸ್ಯನಾಗಿ ನಾನು ಕಂಡಿದ್ದೇನೆ. 15 ವರ್ಷಗಳ ಹಿಂದೆ ಭಾರತದ ಜತೆ ನಾಗರಿಕ ಅಣು ಒಪ್ಪಂದ ಮಾಡಿಕೊಳ್ಳುವ ಪ್ರಯತ್ನದ ಮುಂಚೂಣಿಯಲ್ಲಿ ನಾನಿದ್ದೆ. ಭಾರತ ಹಾಗೂ ಅಮೆರಿಕ ನಿಕಟ ಪಾಲುದಾರರು ಮತ್ತು ಸ್ನೇಹಿತರಾದಲ್ಲಿ ವಿಶ್ವ ಸುರಕ್ಷಿತ ತಾಣವಾಗುತ್ತದೆ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡರು.

ಆದರೆ ದಿಢೀರ್ ಹಾಗೂ ಹಾನಿಕಾರಕ ಎಚ್1ಬಿ ವೀಸಾ ಸೇರಿದಂತೆ ದ್ವೇಷಾಪರಾಧ ಮತ್ತು ಅಕ್ರಮ ವಲಸೆ ತಡೆ ವಿಚಾರದಲ್ಲಿ ಭಾರತೀಯ ಮೂಲದವರು ಗುರಿಯಾಗಿರುವುದು ತೀರಾ ನೋವಿನ ಸಂಗತಿ ಎಂದು ಜೊ ಬಿಡೆನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News