×
Ad

‘ಇಷ್ಟು ವರ್ಷಗಳ ಕಾಲ ಸುಳ್ಳು ಹೇಳಿದ್ದಕ್ಕೆ, ಅಪ್ರಾಮಾಣಿಕರಾಗಿದ್ದಕ್ಕೆ ನಿಮಗೆ ವಿಷಾದವಿದೆಯೇ’

Update: 2020-08-16 14:47 IST

ವಾಷಿಂಗ್ಟನ್: ‘ಇಷ್ಟು ವರ್ಷಗಳ ಕಾಲ ಸುಳ್ಳು ಹೇಳಿದ್ದಕ್ಕೆ ಮತ್ತು ಅಪ್ರಾಮಾಣಿಕರಾಗಿದ್ದಕ್ಕೆ ನಿಮಗೆ ವಿಷಾದವಿದೆಯೇ’ ಎಂದು ಪತ್ರಕರ್ತರೊಬ್ಬರು ಸುದ್ದಿಗೋಷ್ಠಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗಿದೆ.

ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಟ್ರಂಪ್ ಮಾತನಾಡುತ್ತಿದ್ದ ವೇಳೆ ಭಾರತೀಯ ಮೂಲದ ಪತ್ರಕರ್ತ ಎಸ್.ವಿ. ಡಾಟೆ ಈ ಪ್ರಶ್ನೆಯನ್ನು ಕೇಳಿದ್ದರು.

“ಮಿ. ಪ್ರೆಸಿಡೆಂಟ್, 3 ವರ್ಷಗಳ ಕಾಲ ನೀವು ಅಮೆರಿಕಾದ ಜನರಿಗೆ ಎಲ್ಲಾ ಸುಳ್ಳುಗಳನ್ನು ಹೇಳಿರುವುದಕ್ಕೆ ನಿಮಗೆ ವಿಷಾದವಿದೆಯೇ?” ಎಂದು ಪ್ರಶ್ನಿಸಿದರು. ಈ ಸಂದರ್ಭ. “ಏನು ಎಲ್ಲವೂ” ಎಂದು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಡಾಟೆ. “ಎಲ್ಲಾ ಸುಳ್ಳುಗಳು ಮತ್ತು ಅಪ್ರಾಮಾಣಿಕತೆ” ಎಂದರು. ಈ ಸಂದರ್ಭ ಟ್ರಂಪ್ “ಯಾರು ಮಾಡಿದ್ದು” ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಡಾಟೆ, “ನೀವು ಮಾಡಿದ್ದು” ಎಂದರು.

ಈ ಪ್ರಶ್ನೋತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಾಟೆ ಅವರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News