ದಲಿತ ಪಂಚಾಯತ್ ಮುಖ್ಯಸ್ಥೆ ಧ್ವಜಾರೋಹಣ ಮಾಡುವುದನ್ನು ತಡೆದರು: ಆರೋಪ

Update: 2020-08-18 15:51 GMT
ಸಾಂದರ್ಭಿಕ ಚಿತ್ರ

 ಚೆನ್ನೈ,ಆ.18: ತಮಿಳುನಾಡಿನ ಅತ್ತುಪಕ್ಕಂ ಪಂಚಾಯತ್‌ನ ಮೊದಲ ದಲಿತ ಅಧ್ಯಕ್ಷೆ, ಪ್ರದೇಶದಲ್ಲಿ ಜಾತಿ ಶೋಷಣೆ ಮತ್ತು ತಾರತಮ್ಯದ ವಿರುದ್ಧ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅಮೃತಂ ಶನಿವಾರ ಪಂಚಾಯತ್ ಶಾಲೆಯಲ್ಲಿ ಧ್ವಜಾರೋಹಣ ಮಾಡುವುದನ್ನು ತಡೆಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಧನಲಕ್ಷ್ಮಿ ಸ್ವಾತಂತ್ರ್ಯೋತ್ಸವದಂದು ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸುವಂತೆ ಅಮೃತಂ ಅವರನ್ನು ದೂರವಾಣಿ ಮೂಲಕ ಆಹ್ವಾನಿಸಿದ್ದರು. ಶನಿವಾರ ಶಾಲೆಗೆ ತೆರಳಲು ಸಿದ್ಧರಾಗುತ್ತಿದ್ದ ಅಮೃತಂ ಅವರಿಗೆ ಕರೆ ಮಾಡಿದ್ದ ಧನಲಕ್ಷ್ಮಿ, ಕಾರ್ಯಕ್ರಮಕ್ಕೆ ಬರಬಾರದು ಎಂದಿದ್ದರು. ಅವರು ನಿಮ್ಮ ಉಪಸ್ಥಿತಿಯಿಲ್ಲದೆ ಸ್ವಾತಂತ್ರೋತ್ಸವ ಆಚರಿಸಲಿದ್ದಾರೆ. ನೆರೆಯ ಪಂಚಾಯತ್‌ನ ಪದಾಧಿಕಾರಿಗಳು ಧ್ವಜಾರೋಹಣ ನಡೆಸಲಿದ್ದಾರೆ ಎಂದು ತಿಳಿಸಿದ್ದರು.

ಇದು ತನಗೇನೂ ಹೊಸದಲ್ಲ,ಈ ಹಿಂದೆಯೂ ಇಂತಹ ಹಲವಾರು ಅನುಭವಗಳು ತನಗಾಗಿವೆ ಎಂದು ಅಮೃತಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News