ಐಟಿ ಕ್ಷೇತ್ರಕ್ಕೆ ರಾಜೀವ್ ಗಾಂಧಿಯಿಂದ ಅನುಸ್ಮರಣೀಯ ಕೊಡುಗೆ: ಉಪರಾಷ್ಟ್ರಪತಿ
Update: 2020-08-20 21:45 IST
ಹೊಸದಿಲ್ಲಿ, ಆ.20: ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ನೀಡಿರುವ ಕೊಡುಗೆಯನ್ನು ದೇಶವು ಸದಾ ಸ್ಮರಿಸಲಿದೆಯೆಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ರಾಜೀವ್ ಗಾಂದಿ ಜನ್ಮದಿನವಾದ ಗುರುವಾರ ಟ್ವೀಟ್ ಮಾಡಿರುವ ಅವರು ‘‘ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರನ್ನು ಇಂದು ಸ್ಮರಿಸಿಕೊಳ್ಳುತ್ತಿದ್ದೇನೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯು ಸದಾ ಸ್ಮರಿಸಲ್ಪಡಲಿದೆ’’ ಎಂದಿದ್ದಾರೆ.
1944ರ ಆಗಸ್ಟ್ 20ರಂದು ಜನಿಸಿದ ರಾಜೀವ್ ಗಾಂಧಿ ಅವರು 1984ರಿಂದ 1989ರವರೆಗೆ ಪ್ರಧಾನಿಯಾಗಿದ್ದರು. 1991ರ ಮೇ 21ರಂದು ಚುನಾವಣಾ ಪ್ರಚಾರದ ವೇಳೆ ತಮಿಳುನಾಡಿನ ಪೆರಂಬದೂರಿನಲ್ಲಿ ಎಲ್ಟಿಟಿಇ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು.