ಕೊರೋನದಿಂದಾಗಿ 10 ಕೋಟಿ ಜನರು ಮತ್ತೆ ಕಡುಬಡತನಕ್ಕೆ: ವಿಶ್ವಬ್ಯಾಂಕ್ ಎಚ್ಚರಿಕೆ

Update: 2020-08-21 15:36 GMT

ವಾಶಿಂಗ್ಟನ್, ಆ. 21: ಕೊರೋನ ವೈರಸ್‌ನಿಂದಾಗಿ 10 ಕೋಟಿಯಷ್ಟು ಜನರು ಮತ್ತೆ ಕಡುಬಡತನಕ್ಕೆ ಮರಳಿರುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮ್ಯಾಲ್ಪಾಸ್ ಗುರುವಾರ ಹೇಳಿದ್ದಾರೆ.

ಕೋವಿಡ್-19ರಿಂದಾಗಿ ಸುಮಾರು 6 ಕೋಟಿ ಜನರು ಕಡುಬಡತನಕ್ಕೆ ಮರಳಿರಬಹುದು ಎಂಬುದಾಗಿ ಈ ಹಿಂದೆ ವಿಶ್ವಬ್ಯಾಂಕ್ ಅಂದಾಜಿಸಿತ್ತು. ಆದರೆ, ಹೊಸ ಅಂದಾಜಿನ ಪ್ರಕಾರ, ಮತ್ತೆ ಕಡು ಬಡತನದ ತೆಕ್ಕೆಗೆ ಜಾರಿದವರ ಸಂಖ್ಯೆ 7ರಿಂದ 10 ಕೋಟಿಯಾಗಿದೆ. ಅದೂ ಅಲ್ಲದೆ, ಸಾಂಕ್ರಾಮಿಕವು ಬಿಗಡಾಯಿಸಿದರೆ ಅಥವಾ ಮುಂದುವರಿದರೆ ಈ ಸಂಖ್ಯೆಯು ಇನ್ನೂ ಹೆಚ್ಚಬಹುದು ಎಂದು ವಿಶ್ವಬ್ಯಾಂಕ್ ಅಧ್ಯಕ್ಷರು ಎಚ್ಚರಿಸಿದರು.

ಈಗ ನೆಲೆಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಾಂಕ್ರಾಮಿಕದ ಅಪಾಯಕ್ಕೆ ಸಿಲುಕಿರುವ ಬಡ ದೇಶಗಳ ಸಾಲಗಳ ಮರುಪಾವತಿಯನ್ನು ಮುಂದೂಡುವುದಷ್ಟನ್ನೇ ಮಾಡದೆ, ಸಾಲದಾತರು ಸಾಲಗಳ ಮೊತ್ತವನ್ನು ಕಡಿಮೆ ಮಾಡುವ ಅಗತ್ಯವೂ ಇದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮ್ಯಾಲ್ಪಾಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News