ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಕ್ಯಾಮರೂನ್ ವೈಟ್‌ವೃತ್ತಿ ಬದುಕಿಗೆ ವಿದಾಯ

Update: 2020-08-21 17:47 GMT

ಮೆಲ್ಬೊರ್ನ್, ಆ. 21: ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಕ್ಯಾಮರೂನ್ ವೈಟ್ ಅವರು ಎರಡು ದಶಕಗಳ ವೃತ್ತಿಪರ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

ನಾಲ್ಕು ಟೆಸ್ಟ್, 91 ಏಕದಿನ ಮತ್ತು 47 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ 37ರ ಹರೆಯದ ವೈಟ್ ಸೀಮಿತ ಓವರ್‌ಗಳ ಏಳು ಬಾರಿ ಆಸ್ಟ್ರೇಲಿಯ ತಂಡದ ನಾಯಕತ್ವ ವಹಿಸಿದ್ದರು. ‘‘ ನಾನು ಖಂಡಿತವಾಗಿಯೂ ಆಡುವುದನ್ನು ಮುಗಿಸಿದ್ದೇನೆ, ಇದು ನಿಜ ’’ಎಂದು ತಿಳಿಸಿದ್ದಾರೆ.

 ‘‘ನಾನು ಸ್ಟ್ರೇಕರ್ಸ್‌ನೊಂದಿಗೆ ಒಂದು ವರ್ಷದ ಆಟದ ಒಪ್ಪಂದವನ್ನು ಮಾಡಿದ್ದೆ. ನಾನು ಕಳೆದ ವರ್ಷ ಆ ತಂಡದ ಪರ ಬೆರಳೆಣಿಕೆಯಷ್ಟು ಪಂದ್ಯಗಳನ್ನು ಮಾತ್ರ ಆಡಿದ್ದೇನೆ. ಒಪ್ಪಂದವನ್ನು ಮುಂದುವರಿಸಲು ನಾನು ಚೆನ್ನಾಗಿ ಆಡಬೇಕಾಗಿತ್ತು ’’ ಎಂದು ಹೇಳಿದ್ದಾರೆ.

‘ ನನ್ನ ಸಮಯ ಖಂಡಿತವಾಗಿಯೂ ಮುಗಿದಿದೆ ಎಂದು ನಾನು ಭಾವಿಸುತ್ತೇನೆ, ಆಟದ ದೃಷ್ಟಿಕೋನದಿಂದ ನಾನು ಸಾಕಷ್ಟು ಪಡೆದಿದ್ದೇನೆ ಮತ್ತು ತರಬೇತಿಯತ್ತ ಗಮನಹರಿಸಲು ಸಿದ್ಧನಿದ್ದೇನೆ ’’ಎಂದು ಅವರು ಹೇಳಿದರು.

    ಕಳೆದ ಬೇಸಿಗೆಯಲ್ಲಿ ಅಡಿಲೇಡ್ ಸ್ಟ್ರೇಕರ್ಸ್ ಪರ ಕೇವಲ ಆರು ಪಂದ್ಯಗಳನ್ನು ಆಡಿದ ವೈಟ್ ದೇಶೀಯ ಕ್ರಿಕೆಟ್‌ನಲ್ಲಿ ಸಮೃದ್ಧ ದಾಖಲೆಯನ್ನು ಹೊಂದಿದ್ದಾರೆ. ಅವರು 10ದೇಶೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆರು ಶೆಫೀಲ್ಡ್ ಶೀಲ್ಡ್ಸ್, ದೇಶೀಯ ಏಕದಿನ ಪ್ರಶಸ್ತಿ , ಹಳೆಯ ರಾಜ್ಯ ಆಧಾರಿತ ಟ್ವೆಂಟಿ-20 ಲೀಗ್‌ನಲ್ಲಿ ಎರಡು ಗೆಲುವು ಮತ್ತು ಬಿಗ್ ಬ್ಯಾಷ್ ಲೀಗ್ ಟ್ರೋಫಿ ಎತ್ತಿದ್ದರು.

  ಇದೀಗ ಅವರು ಝೂಮ್ ಮೂಲಕ ವಿಕ್ಟೋರಿಯಾ ಅಂಡರ್ -19 ತಂಡಕ್ಕೆ ಆನ್‌ಲೈನ್‌ನಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News