ಡೇವಿಡ್ ಜಾನ್ ಹಾಕಿ ಇಂಡಿಯಾದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ

Update: 2020-08-21 18:09 GMT

 ಹೊಸದಿಲ್ಲಿ, ಆ.21: ಹಾಕಿ ಇಂಡಿಯಾದ ನಿರ್ದೇಶಕ ಡೇವಿಡ್ ಜಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 ಅವರ ರಾಜೀನಾಮೆಯನ್ನು ಹಾಕಿ ಇಂಡಿಯಾ ಸ್ವೀಕರಿಸಿದ್ದು, ಆದರೆ ಅಧಿಕೃತ ಉದ್ಯೋಗದಾತರಾಗಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಭಾರತೀಯ ಹಾಕಿಯಲ್ಲಿ ಎಲ್ಲವೂ ಎಂದಿಗೂ ಸ್ಥಿರವಾಗಿರುವುದಿಲ್ಲ. ಆಟಗಾರರು ಐದು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಪಂದ್ಯವಿಲ್ಲದೆ ಇದ್ದಾರೆ. 2020ರ ಅಂತ್ಯದವರೆಗೂ ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಆದರೆ ಈಗ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಡೇವಿಡ್ ಜಾನ್ ತಂಡದಿಂದ ದೂರ ಸರಿದಿದ್ದಾರೆ.

  ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನು ಒಂದು ವರ್ಷಕ್ಕಿಂತ ಕಡಿಮೆ ಸಮಯವಿರುವಾಗ ಜಾನ್ ರಾಜೀನಾಮೆ ನೀಡಲು ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಜಾನ್ ಹಾಕಿ ಇಂಡಿಯಾ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್ ) ಎರಡಕ್ಕೂ ಪತ್ರ ಬರೆದಿದ್ದಾರೆ. ಹಾಕಿ ಇಂಡಿಯಾ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಮತ್ತು ಜಾನ್ ಅವರ ನಿರ್ಗಮನಕ್ಕೆ ಆರೋಗ್ಯದ ಸಮಸ್ಯೆ ಕಾರಣವೆಂದು ಪುನರುಚ್ಚರಿಸಿದೆ. ಆದರೆ ಸಾಯ್ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸೆಪ್ಟಂಬರ್ 2021ರವರೆಗೆ ಎಲ್ಲಾ ವಿದೇಶಿ ಕೋಚ್‌ಗಳ ಒಪ್ಪಂದಗಳನ್ನು ವಿಸ್ತರಿಸುವ ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಅನುಸರಿಸಿ ಜಾನ್ ಅವರ ಒಪ್ಪಂದವನ್ನು ಇತ್ತೀಚೆಗೆ ನವೀಕರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News