×
Ad

“ಮಾಜಿ ಸಿಜೆಐ ರಂಜನ್ ಗೊಗೊಯಿ ಅಸ್ಸಾಂನಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆ”

Update: 2020-08-23 12:13 IST

ಗುವಾಹಟಿ: ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಅಸ್ಸಾಂನ ಮಾಜಿ ಸಿಎಂ ಮತ್ತು ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಹೇಳಿದ್ದಾರೆ.

“ಬಿಜೆಪಿಯ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿಯವರ ಹೆಸರಿದೆ ಎನ್ನುವ ಮಾಹಿತಿ ನನಗೆ ಮೂಲಗಳಿಂದ ತಿಳಿದು ಬಂದಿದೆ. ಅವರನ್ನು ಅಸ್ಸಾಂನ ಮುಂದಿನ ಸಿಎಂ ಎಂದು ಬಿಂಬಿಸುವ ಸಾಧ್ಯತೆ ಇದೆ” ಎಂದವರು ಹೇಳಿದರು.

“ಇದು ಎಲ್ಲವೂ ರಾಜಕೀಯ. ಅಯೋಧ್ಯೆ ರಾಮ ಮಂದಿರ ತೀರ್ಪಿಗೆ ಸಂಬಂಧಿಸಿ ರಂಜನ್ ಗೊಗೊಯಿ ಬಗ್ಗೆ ಬಿಜೆಪಿಗೆ ಸಂತೋಷವಿದೆ. ರಾಜ್ಯಸಭಾ ಸ್ಥಾನ ಸ್ವೀಕರಿಸಿದ ಅವರು ನಂತರ ರಾಜಕೀಯ ಪ್ರವೇಶಿಸಿದರು. ಅವರು ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿಲ್ಲ ಏಕೆ? , ಅವರು ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಬಹುದಿತ್ತು” ಎಂದು ತರುಣ್ ಗೊಗೊಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News