ಬಿಹಾರ ಚುನಾವಣೆ: ನಿತೀಶ್ ಕುಮಾರ್ ನಾಯಕತ್ವದಲ್ಲಿ ಹೋರಾಟ ಎಂದ ಬಿಜೆಪಿ
Update: 2020-08-23 13:13 IST
ಹೊಸದಿಲ್ಲಿ, ಆ.23: ಜೆಡಿಯು ಮೈತ್ರಿಯೊಂದಿಗೆ ನಿತೀಶ್ ಕುಮಾರ್ ನಾಯಕತ್ವದಲ್ಲಿ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರವಿವಾರ ಹೇಳಿದ್ದಾರೆ.
"ಭಾರತೀಯ ಜನತಾ ಪಕ್ಷ,ಜನತಾ ದಳ(ಸಂಯುಕ್ತ) ಹಾಗೂ ಲೋಕಜನಶಕ್ತಿ ಪಕ್ಷ ಒಟ್ಟಿಗೆ ಚುನಾವಣೆಯಲ್ಲಿ ಹೋರಾಟ ನಡೆಸಿ ಜಯ ಸಾಧಿಸಲಿವೆ. ನಾವು ಬಿಜೆಪಿಗೆ ಮಾತ್ರವಲ್ಲ ಪಾಲುದಾರ ಮೈತ್ರಿ ಪಕ್ಷಗಳಿಗೆ ವೌಲ್ಯವನ್ನು ಸೇರಿಸಬೇಕಾಗಿದೆ'' ಎಂದು ಬಿಹಾರ ಬಿಜೆಪಿ ಕಾರ್ಯಸಮಿತಿಯೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಬಿಹಾರದಲ್ಲಿ ಕೊರೋನ ವೈರಸ್ ನಿಯಂತ್ರಿಸಲು ಕೇಂದ್ರ ಸರಕಾರ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ,ನಾವು 12,50,000 ಬೆಡ್‌ಗಳು ಹಾಗೂ 2,000ಕ್ಕೂ ಅಧಿಕ ಕೋವಿಡ್-19 ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದರು.