×
Ad

ಟಿವಿ ,ಚಲನಚಿತ್ರ ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಸಚಿವ ಪ್ರಕಾಶ್ ಜಾವಡೇಕರ್

Update: 2020-08-23 13:30 IST

ಹೊಸದಿಲ್ಲಿ, ಆ. 23: ಕೊರೋನ ಸಾಂಕ್ರಾಮಿಕ ರೋಗದ ನಡುವೆ ಮಾಧ್ಯಮ ಪ್ರೊಡಕ್ಷನ್ ಉದ್ಯಮಗಳಲ್ಲಿ ಕೆಲಸ ಮಾಡುವವರು ಪ್ರವೇಶ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯ ಬಳಕೆ ಹಾಗೂ 6 ಅಡಿಗಳ ಸುರಕ್ಷಿತ ಅಂತರ ಮೊದಲಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಈ ನೂತನ ನಿಯಮಗಳು ಕೇಂದ್ರ ಸರಕಾರ ರವಿವಾರ ಜಾರಿಗೊಳಿಸಿದ ‘ಪ್ರಮಾಣಿತ ಕಾರ್ಯ ವಿಧಾನ’ (ಎಸ್‌ಒಪಿ)ದ ಒಂದು ಭಾಗವಾಗಿದೆ.

‘ಪ್ರಮಾಣಿತ ಕಾರ್ಯ ವಿಧಾನ’ (ಎಸ್‌ಒಪಿ)ದ ಹಿಂದಿರುವ ಈ ಸಾಮಾನ್ಯ ಅಂಶಗಳು ಮಾಧ್ಯಮ ಪ್ರೊಡಕ್ಷನ್ ಉದ್ಯಮದಲ್ಲಿ ಕಲಾವಿದರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕಾರ್ಯ ನಿರ್ವಹಿಸುವ ಪರಿಸರ ಸೃಷ್ಟಿಸಲು ನೆರವಾಗಲಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಮಾರ್ಗಸೂಚಿ ಬಿಡುಗಡೆಗೊಳಿಸಿ ತಿಳಿಸಿದ್ದಾರೆ.

ಆರೋಗ್ಯ ಹಾಗೂ ಗೃಹ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ‘ಪ್ರಮಾಣಿತ ಕಾರ್ಯ ವಿಧಾನ’ (ಎಸ್‌ಒಪಿ)ವನ್ನು ಅಂತಿಮಗೊಳಿಸಲಾಗಿದೆ. ಚಿತ್ರೀಕರಣ ಸ್ಥಳ ಹಾಗೂ ಕಾರ್ಯ ನಿರ್ವಹಣಾ ಸ್ಥಳದಲ್ಲಿ ಸಾಕಷ್ಟು ಅಂತರ, ಸೂಕ್ತ ಸ್ಯಾನಿಟೈಸೇಶನ್, ಜನಸಂದಣಿ ನಿರ್ವಹಣೆ ಹಾಗೂ ಇತರರು ಸುರಕ್ಷಾ ಸಾಧನಗಳನ್ನು ಬಳಕೆಗೆ ಈ ‘ಪ್ರಮಾಣಿತ ಕಾರ್ಯ ವಿಧಾನ’ (ಎಸ್‌ಒಪಿ) ಖಾತರಿ ನೀಡುತ್ತದೆ. ಕ್ಯಾಮರಾದ ಮುಂದಿರುವವರನ್ನು ಹೊರತುಪಡಿಸಿ. ಉಳಿದವರೆಲ್ಲರೂ ಮಾಸ್ಕ್ ಧರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂಪರ್ಕ ಕಡಿಮೆಗೊಳಿಸುವುದು ‘ಪ್ರಮಾಣಿತ ಕಾರ್ಯ ವಿಧಾನ’ (ಎಸ್‌ಒಪಿ) ಪ್ರಮುಖ ಅಂಶ. ಭೌತಿಕ ಸಂಪರ್ಕ ಹಾಗೂ ವಸ್ತುಗಳನ್ನು ಹಂಚಿಕೊಳ್ಳುವುದನ್ನು ಕಡಿಮೆಗೊಳಿಸುವುದು, ಕೂದಲು ಸ್ಟೈಲಿಸ್ಟ್‌ಗಳು ಹಾಗೂ ಮೇಕಪ್ ಆರ್ಟಿಸ್ಟ್‌ಗಳು ಪಿಪಿಇ ಕಿಟ್‌ಗಳನ್ನು ಬಳಸುವುದರಿಂದ ಇದನ್ನು ಸಾಧಿಸಬಹುದು ಎಂದು ಅವರು ತಿಳಿಸಿದ್ದಾರೆ.

 ಮನೋರಂಜನಾ ಉದ್ಯಮಕ್ಕೆ ಬಿಡುಗಡೆ ಮಾಡಿದ ‘ಪ್ರಮಾಣಿತ ಕಾರ್ಯ ವಿಧಾನ’ (ಎಸ್‌ಒಪಿ)ದಲ್ಲಿನ ‘ಆರೋಗ್ಯ ಸೇತು’ವನ್ನು ಬಳಸುವಂತೆ ಅವರು ಸಲಹೆ ನೀಡಿದ್ದಾರೆ. ಚಲನಚಿತ್ರ ಹಾಗೂ ಟೆಲಿವಿಷನ್ ಆರ್ಥಿಕತೆಯ ಒಂದು ಮುಖ್ಯ ಭಾಗ. ಆದುದರಿಂದ ಈ ‘ಗುಣಮಟ್ಟದ ಕಾರ್ಯ ವಿಧಾನ’ (ಎಸ್‌ಒಪಿ)ವನ್ನು ಎಲ್ಲ ರಾಜ್ಯಗಳು ಅನುಷ್ಠಾನಗೊಳಿಸಬೇಕು ಎಂದು ಜಾವ್ಡೇಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News