×
Ad

ಯುಎಇಗೆ ಆಗಮಿಸಿದ ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್

Update: 2020-08-23 23:13 IST

ದುಬೈ, ಆ.23: ಮುಂಬರುವ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಮಾಸ್ಕ್‌ಗಳು ಹಾಗೂ ಫೇಸ್‌ಶೀಲ್ ್ಡಗಳನ್ನು ಧರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ದುಬೈಗೆ ಆಗಮಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಭಾರತದ ಸ್ಥಳಾಂತರವಾಗಿರುವ ವಿಶ್ವದ ಅತ್ಯಂತ ದೊಡ್ಡ ಟ್ವೆಂಟಿ-20 ಲೀಗ್ ಐಪಿಎಲ್ ಸೆಪ್ಟಂಬರ್ 19ರಿಂದ ನವೆಂಬರ್ 10ರ ತನಕ ದುಬೈ, ಅಬುಧಾಬಿ ಹಾಗೂ ಶಾರ್ಜಾ ನಗರಗಳಲ್ಲಿ ನಡೆಯಲಿದೆ.

 ಹೈದರಾಬಾದ್ ಮೂಲದ ಫ್ರಾಂಚೈಸಿ ಸನ್‌ರೈಸರ್ಸ್ ಮೊದಲಿಗೆ ನಗರಕ್ಕೆ ಆಗಮಿಸಿತು. ಆ ಬಳಿಕ ಡೆಲ್ಲಿ ತಂಡ ಆಗಮಿಸಿತು. ಇವೆರಡೂ ತಂಡಗಳು ಮುಂಬೈ ಮುಖಾಂತರ ಯುಎಇ ತಲುಪಿವೆ.

ಬಿಸಿಸಿಐನ ಸ್ಟಾಂಡರ್ಡ್ ಆಪರೇಟಿಂಗ್ ನಿಯಮದ ಪ್ರಕಾರ ಆಟಗಾರರು ಕಡ್ಡಾಯವಾಗಿ ಆರು ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ಕ್ವಾರಂಟೈನ್‌ನ 1,3 ಹಾಗೂ ಆರನೇ ದಿನದಂದು ಪ್ರತಿಯೊಬ್ಬರು ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು. ಟೂರ್ನಮೆಂಟ್ ಆರಂಭಕ್ಕೆ ಮೊದಲು ಎಲ್ಲ ಆಟಗಾರರು ಮೂರು ಬಾರಿ ನಡೆಯುವ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಪಡೆಯಬೇಕಾಗುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು,ಕಿಂಗ್ಸ್ ಇಲೆವೆನ್ ಪಂಜಾಬ್,ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಶುಕ್ರವಾರ ಯುಎಇಗೆ ಪಾದಾರ್ಪಣೆ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News